Video, ಗುಜರಾತ್‌ನಲ್ಲಿ ಪಾಕಿಸ್ತಾನ ಮಾತ್ರವಲ್ಲ ಬಾಂಗ್ಲಾ ವಲಸಿಗರಿಗೂ ಗೇಟ್ ಪಾಸ್ : ಸ್ವಚ್ಛ ಭಾರತ್ ಅಭಿಯಾನ ಶುರು

Sampriya

ಶನಿವಾರ, 26 ಏಪ್ರಿಲ್ 2025 (17:02 IST)
Photo Credit X
ಗುಜರಾತ್‌: ಅಹಮದಾಬಾದ್ ಮತ್ತು ಸೂರತ್‌ನಾದ್ಯಂತ ಅಕ್ರಮವಾಗಿ ನೆಲೆಸಿದ್ದ 550 ಕ್ಕೂ ಹೆಚ್ಚು ವಲಸಿಗರನ್ನು ಬಂಧಿಸಲಾಗಿದೆ. ಮುಖ್ಯವಾಗಿ ಬಾಂಗ್ಲಾದೇಶದಿಂದ ಅಹಮದಾಬಾದ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎನ್ನಲಾದ 450ಕ್ಕೂ ಹೆಚ್ಚು ವಲಸಿಗರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.

ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಗುರುತಿಸಿ ಬಂಧಿಸಲು ಅಹಮದಾಬಾದ್ ಕ್ರೈಂ ಬ್ರಾಂಚ್, ವಿಶೇಷ ಕಾರ್ಯಾಚರಣೆ ಗುಂಪು, ಆರ್ಥಿಕ ಅಪರಾಧ ವಿಭಾಗದ ತಂಡಗಳ ಸಮನ್ವಯದೊಂದಿಗೆ ನಗರದ ವಿವಿಧ ಪ್ರದೇಶಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿತು.

457 ನುಸುಳುಕೋರರನ್ನು ಬಂಧಿಸಲಾಗಿದ್ದು, ಇದೀಗ ಎಲ್ಲರ ವಿಚಾರಣೆ ನಡೆಸಲಾಗುತ್ತಿದೆ.  ಮುಂದಿನ ದಿನಗಳಲ್ಲಿ ಎಲ್ಲರನ್ನೂ ಗಡಿಪಾರು ಮಾಡಲಾಗುವುದು ಎಂದು ಅಹಮದಾಬಾದ್ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಶರದ್ ಸಿಂಘಾಲ್ ಹೇಳಿದ್ದಾರೆ.

ಸೂರತ್‌ನಲ್ಲಿ ಸಮಾನಾಂತರ ಕಾರ್ಯಾಚರಣೆಯಲ್ಲಿ, ನಗರ ಪೊಲೀಸರು ಆರು ವಿಭಿನ್ನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಪಕ ಹುಡುಕಾಟ ನಡೆಸಿದರು. ಉಧಾನ, ಕಟರ್ಗಾಮ್, ಮಹಿಧರ್‌ಪುರ, ಪಾಂಡೇಸರ, ಸಲಾಬತ್‌ಪುರ ಮತ್ತು ಲಿಂಬಯತ್ - ಮತ್ತು 100 ಕ್ಕೂ ಹೆಚ್ಚು ಬಾಂಗ್ಲಾದೇಶಿ ನಾಗರಿಕರನ್ನು ಬಂಧಿಸಿದ್ದಾರೆ.

ಈ ವ್ಯಕ್ತಿಗಳು ನಗರದಲ್ಲಿ ವರ್ಷಗಳಿಂದ ವಾಸಿಸುತ್ತಿದ್ದು, ನಕಲಿ ದಾಖಲೆಗಳನ್ನು ಬಳಸಿ ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Well done gujarat police, they detained 1000+ bangaladeshi in ahemdabad & surat.... Now deliver them at the Bangladesh border....pic.twitter.com/KD0ehgMGyk

— Dr. Mayur Sejpal ???????? (@mayursejpal) April 26, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ