ಮೋದಿ ಸಮಾವೇಶ ನಡೆದ ಜಾಗದಲ್ಲಿ ಪತ್ನಿ ಜೊತೆ ಇಂದು ಕಸ ತೆಗೆದ ಯದುವೀರ್ ಒಡೆಯರ್

Krishnaveni K

ಸೋಮವಾರ, 15 ಏಪ್ರಿಲ್ 2024 (13:33 IST)
Photo Courtesy: Twitter
ಮೈಸೂರು: ನಿನ್ನೆ ಪ್ರಧಾನಿ ಮೋದಿ ಭಾಗಿಯಾಗಿದ್ದ ಎನ್ ಡಿಎ ಲೋಕಸಭಾ ಪ್ರಚಾರ ಸಮಾವೇಶದಲ್ಲಿ ಸಾವಿರಾರು ಜನ ಸೇರಿದ್ದರು. ಇಂದು ಅದೇ ಜಾಗದಲ್ಲಿ ಮೈಸೂರು ಬಿಜೆಪಿ ಅಭ್ಯರ್ಥಿ, ರಾಜವಂಶಸ್ಥ ಯದುವೀರ್ ಒಡೆಯರ್ ಕಸ ತೆಗೆದು ಸ್ವಚ್ಛತೆ ಕೆಲಸ ಮಾಡಿದ್ದಾರೆ.

ನಿನ್ನೆ ಸಂಜೆ ಮೋದಿ ಇಲ್ಲಿ ಸಮಾವೇಶದಲ್ಲಿ ಭಾಗಿಯಾಗಿ ಸಾವಿರಾರು ಜನರನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ವೇದಿಕೆಯಲ್ಲಿ ಜೆಡಿಎಸ್ ನಾಯಕರಾದ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಕೂಡಾ ಭಾಗಿಯಾಗಿದ್ದರು. ಈ ವೇಳೆ ನಾನು ಎಸಿಯಲ್ಲಿ ಕೂತಿರುವವನು ಎಂದು ಟೀಕಿಸುತ್ತಾರೆ. ಆದರೆ ನಾನೂ ನಿಮ್ಮ ಬಳಿ ಬರುತ್ತೇನೆ. ನಿಮ್ಮವನಲ್ಲಿ ಒಬ್ಬನಾಗಲು ಬಯಸುತ್ತೇನೆ ಎಂದಿದ್ದರು.

ಇದು ಕೇವಲ ಭಾಷಣಕ್ಕೆ ಸೀಮಿತವಾಗಿಲ್ಲ. ಇಂದು ಬೆಳಿಗ್ಗೆಯೇ ತಮ್ಮ ಪತ್ನಿ ತ್ರಿಷಿಕಾ ಮತ್ತು ಸಂಗಡಿಗರ ಜೊತೆ ನಿನ್ನೆ ಸಮಾವೇಶ ನಡೆದ ಜಾಗಕ್ಕೆ ಬಂದ ಯದುವೀರ್ ಒಡೆಯರ್ ಕೈಗೆ ಗ್ಲೌಸ್ ಹಾಕಿಕೊಂಡು ಸಾಮಾನ್ಯರಂತೇ ಕಸ ಹೆಕ್ಕಿ ಸ್ವಚ್ಛತಾ ಕೆಲಸ ಮಾಡಿದ್ದಾರೆ. ಆ ಮೂಲಕ ರಾಜವಂಶಸ್ಥನಾದರೂ ತಾನು ಯಾವ ಕೆಲಸಕ್ಕೂ ಸೈ ಎಂದು ತೋರಿಸಿಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ