ಪಕ್ಕದ್ಮನೆ ಪ್ರಿಯಕರ ಜೊತೆಗೂಡಿ ಮರ್ಮಾಂಗಕ್ಕೆ ಹೊಡೆದು ಪತಿ ಕೊಂದ ಪತ್ನಿ!
ಕಾಫಿಯಲ್ಲಿ ಬೆರೆಸಿದ್ದ ನಿದ್ದೆ ಮಾತ್ರೆ ಸೇವಿಸಿ ನಿದ್ದೆಗೆ ಜಾರಿದ ಪತಿಯ ಮರ್ಮಾಂಗದ ಮೇಲೆ ಹಲ್ಲೆ ಮಾಡಿ ಕೊಂದ ಪ್ರಕರಣವನ್ನು 9 ತಿಂಗಳ ನಂತರ ಭೇದಿಸಿದ ಮೈಸೂರು ಜಿಲ್ಲೆಯ ಬನ್ನೂರು ಪೊಲೀಸರು ಪ್ರಿಯಕರ ಹಾಗೂ ಪತ್ನಿಯನ್ನು ಬಂಧಿಸಿದ್ದಾರೆ.
ಪತ್ನಿ ಉಮಾ (29) ಹಾಗೂ ಪ್ರಿಯಕರ ಅವಿನಾಶ್ ಬಂಧಿತ ಆರೋಪಿಗಳು. ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ಗ್ರಾಮದ ನಿವಾಸಿ ವೆಂಕಟರಾಜು (50) ಕೊಲೆಯಾದ ದುರ್ದೈವಿ.