ಇನ್ನೂ ಅನುಷ್ಠಾನಕ್ಕೆ ಬಾರದ NCMC ಕಾರ್ಡ್

ಶುಕ್ರವಾರ, 8 ಡಿಸೆಂಬರ್ 2023 (21:04 IST)
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ರಾಷ್ಟ್ರೀಯ ಕಾಮನ್​ ಮೊಬಿಲಿಟಿ ಕಾರ್ಡ್ ಪರಿಚಯಿಸಿದೆ. ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾತ್ರ ರಾಷ್ಟ್ರೀಯ ಕಾಮನ್​ ಮೊಬಿಲಿಟಿ ಕಾರ್ಡ್ ಅನ್ನು ಇನ್ನೂ ಅಳವಡಿಸಿಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ.

ಒಂದೇ ಕಾರ್ಡಿನಲ್ಲಿ ಹಲವು ಸೇವೆಗಳನ್ನು ಒದಗಿಸುವ ಈ ರಾಷ್ಟ್ರೀಯ ಕಾಮನ್​ ಮೊಬಿಲಿಟಿ ಕಾರ್ಡ್​​ ಅನುಷ್ಠಾನ ಬಗ್ಗೆ ಬಿಎಂಟಿಸಿ ಇನ್ನೂ ಚರ್ಚೆಯ ಹಂತದಲ್ಲಿದೆ. ಬಿಎಂಟಿಸಿ ಮತ್ತು ಮೆಟ್ರೊವನ್ನು ಸಂಯೋಜಿಸಬೇಕು ಮತ್ತು ಪ್ರತಿಸ್ಪರ್ಧಿಗಳಾಗಬಾರದು, ಪರಸ್ಪರ ಪೂರಕವಾಗಿರಬೇಕು ಎಂಬ ಉದ್ದೇಶವೂ ಇದೆ. ಸದ್ಯ ನಮ್ಮ ಮೆಟ್ರೋವನ್ನು ವೈಟ್‌ಫೀಲ್ಡ್‌ವರೆಗೆ ವಿಸ್ತರಿಸಿರುವುದು ಬಿಎಂಟಿಸಿಗೆ ಪೂರಕವಾಗಿದೆ ಅಂತಲೂ ಭಾವಿಸಲಾಗಿದೆ.

ವೈಟ್‌ಫೀಲ್ಡ್‌ವರೆಗೆ ಮೆಟ್ರೋ ವಿಸ್ತರಣೆ ಬಹುದಿನಗಳ ಬೇಡಿಕೆ ಆಗಿತ್ತು. ಇದು ಈಡೇರುತ್ತಿದ್ದಂತೆ ಬಿಎಂಟಿಸಿ ಬಸ್​ ಫೀಡರ್ ಬಸ್ ಸೇವೆಗಳು ಆರಂಭವಾದವು. ಇದರಿಂದ ಬಿಎಂಟಿಸಿಗೆ ಒತ್ತಡ ಹೆಚ್ಚಾಯಿತು. ಫೀಡರ್ ಬಸ್‌ಗಳು ಮತ್ತು ವಿಸ್ತರಿತ ಮೆಟ್ರೋ ಸೇವೆಗಳ ಸಂಯೋಜನೆಯು ಬೆಂಗಳೂರಿನ ಸಂಚಾರ ದಟ್ಟಣೆ ತಕ್ಕಮಟ್ಟಿಗೆ ಕಡಿಮೆಯಾಗಿದೆ ಎಂದು BMRCL ಎಂಡಿ ಅಂಜುಮ್ ಪರ್ವೇಜ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ