ಇನ್ಮೇಲೆ ಕಾವೇರಿ ನೀರಿನ ಆತಂಕ ನಗರದಲ್ಲಿ ಇರಲ್ಲ

ಗುರುವಾರ, 7 ಡಿಸೆಂಬರ್ 2023 (15:42 IST)
ಮುಂದಿ‌‌ನ ವರ್ಷದ ಏಪ್ರಿಲ್ ನಿಂದ ಬೆಂಗಳೂರಿನಲ್ಲಿ ಕಾವೇರಿ ನೀರಿಗಿಲ್ಲ ಟೆನ್ಷನ್ ಇರಲ್ಲ.ಬೆಂಗಳೂರಿಗೆ ಏಪ್ರಿಲ್ ನಿಂದ ಹೆಚ್ಚುವರಿ 10 ಟಿಎಂಸಿ ಕಾವೇರಿ ನೀರು ಬಂದೇಬಿಡ್ತು.ಏಪ್ರಿಲ್ ನಿಂದ ಬೆಂಗಳೂರಿಗರ ನೀರಿನ ದಾಹ  ಕಾವೇರಿ 5 ನೇ ಹಂತ ಯೋಜನೆ  ತಣ್ಣಿಸಲಿದೆ.ಸದ್ಯ ಕಾವೇರಿ 1.2.3.4 ಹಂತಗಳ ಮೂಲಕ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಆಗಲಿದೆ.
 
ನಾಲ್ಕು ಹಂತದಿಂದ ಪ್ರತಿ ನಿತ್ಯ 135 ಕೋಟಿ ಲೀಟರ್ (1450 MLD)  ಬೆಂಗಳೂರು ನಗರಕ್ಕೆ ನೀರು ಪೂರೈಕೆಯಾಗಲಿದೆ.ಹೀಗಿದ್ರೂ ನಗರದಲ್ಲಿ ನಿತ್ಯ 75 ಕೋಟಿ ಲೀಟರ್ ಕೊರತೆಯಾಗಿದೆ.ನೀರಿನ ಕೊರತೆ ನೀಗಿಸಲು ಏಪ್ರಿಲ್ ನಿಂದ ಹೆಚ್ಚುವರಿ ವಾರ್ಷಿಕ 10 ಟಿಎಂಸಿ ನೀರು ಸಿಗಲಿದೆ.ಕಾವೇರಿ 5 ನೇ ಹಂತದ ಯೋಜನೆಗೆ 2014 ಸಚಿವ ಸಂಪುಟ ಅನುಮೋದನೆ ಸಿಗಲಿದೆ.

ಕಾವೇರಿ 5 ನೇ ಹಂತದ ಯೋಜನಾ ಕಾಮಗಾರಿ ಏಪ್ರಿಲ್ ನಲ್ಲಿ ಮುಕ್ತಾಯವಾಗಲಿದ್ದು,ಹೀಗಾಗಿ ಏಪ್ರಿಲ್ ನಿಂದ ಬೆಂಗಳೂರು ನಗರಕ್ಕೆ  ಹೆಚ್ಚುವರಿ ಕಾವೇರಿ ನೀರು ಹರಿದು ಬರಲಿದೆ.ಕಾವೇರಿ 5ನೇ ಹಂತದ ಯೋಜನೆ ಏಪ್ರಿಲ್ ನಲ್ಲಿ ಪೂರ್ಣದ ಭರವಸೆ  ಬೆಂಗಳೂರು ಜಲಮಂಡಳಿ ನೀಡಿದೆ.ಬಹುದಿನಗಳ ಬೆಂಗಳೂರಿಗರ ಕನಸು ನನಸಾಗುವತ್ತ ಸಾಗಿದೆ.
 
ಏಪ್ರಿಲ್ 2024ಕ್ಕೆ ನಗರದ ಪ್ರತಿ ನಾಗರೀಕರಿಗೆ ಜಲಮಂಡಳಿ ಸಿಹಿಸುದ್ದಿ ನೀಡಿದೆ. BWSSB ಕೈಗೆತ್ತಿಕೊಂಡಿರುವ ಕಾವೇರಿ 5ನೇ ಹಂತ ಮುಕ್ತಾಯದತ್ತ ಸಾಗಿದೆ.ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ಯೋಜನೆ ಪೂರ್ಣಗೊಳ್ತಿದೆ.ಏಪ್ರಿಲ್ ನಿಂದ ಬೆಂಗಳೂರಿನ ಮನೆ ಮನೆಗೂ ಕಾವೇರಿ ನೀರು ಪೂರೈಕೆಯಾಗಲಿದೆ.

ಕೋವಿಡ್​ನಿಂದ ಸಾಕಷ್ಟು ವಿಳಂಬವಾಗಿದ್ದ ಕಾವೇರಿ 5ನೇ ಹಂತದ ಕಾಮಗಾರಿ ಬೆಂಗಳೂರಿನ ಹೊರವಲಯಗಳ 110 ಹಳ್ಳಿಗಳಿಗೆ ಸಪ್ಲೈ ಆಗಲಿದೆ.ಈಗಾಗಲೇ ನೀರಿನ ಸಂಪರ್ಕ ಬೆಂಗಳೂರು ಜಲಮಂಡಳಿ ಕಲ್ಪಿಸಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ