ಬೆಂಗಳೂರಿನಲ್ಲಿ ಚುರುಕು ಪಡೆದ ನಮ್ಮ ಮೆಟ್ರೋ ಸುರಂಗ ಕಾಮಗಾರಿ

ಬುಧವಾರ, 6 ಡಿಸೆಂಬರ್ 2023 (14:00 IST)
ನಮ್ಮ ಮೆಟ್ರೋ ಸುರಂಗ ಕಾಮಗಾರಿ ಚುರುಕುಗೊಂಡಿದೆ.ಇಂದು ಸುರಂಗ ಕೊರೆದ ತುಂಗಾ ಹೆಸರಿನ ಟಿಬಿಎಂ ಕೆಜಿ ಹಳ್ಳಿ ನಿಲ್ದಾಣದಿಂದ ಹೊರಬಂದಿದೆ.
 
ವೆಂಕಟೇಶಪುರ ನಿಲ್ದಾಣದಿಂದ 2022 ಡಿಸೆಂಬರ್ ನಲ್ಲಿ ಸುರಂಗ ಕೊರೆಯುವ ಕಾರ್ಯಕ್ಕೆ ತುಂಗಾ ಕೈ ಹಾಕಿದ್ದು,1184 .4 ಮೀಟರ್  ಕೊರೆದು ಕೆಜಿ ಹಳ್ಳಿ ನಿಲ್ದಾಣದಿಂದ ಸುರಂಗ ಕೊರೆಯುವ ಯಂತ್ರ ಹೊರಬಂದಿದೆ.
 
ಎರಡನೇ ಹಂತದ ಮೆಟ್ರೋ ಸುರಂಗ ಕಾಮಗಾರಿ ಶೇ 89.70 ರಷ್ಟು  ಮುಕ್ತಾಯವಾಗಿದೆ.ರೀಚ್ ,6 ಸುರಂಗ ಮಾರ್ಗಕ್ಕೆ ನಿಯೋಜಿಸಿದ 9 ಟಿಬಿಎಂಗಳಲ್ಲಿ 7 ಟಿಬಿಎಂ ಗಳ  ಕಾಮಗಾರಿ ಮುಕ್ತಾಯವಾಗಿದೆ.ಎರಡನೇ ಹಂತದಲ್ಲಿ 13 ಕಿ‌ಮೀಟರ್ ಸುರಂಗ ಕಾಮಗಾರಿ  ಬಿ ಎಂ ಆರ್ ಸಿ ಎಲ್ ನಿರ್ಮಿಸಿತ್ತು.ಗೊಟ್ಟಿಗೇರೆ - ನಾಗವಾರ ಮಾರ್ಗದಲ್ಲಿ  ಸುರಂಗ ಮೆಟ್ರೋ ಕಾಮಗಾರಿ ನಿರ್ಮಾಣವಾಗಿದೆ.ಇಂದು ತುಂಗಾ ಎನ್ನುವ ಸುರಂಗ ಕೊರೆಯುವ ಯಂತ್ರ ಮತ್ತೊಂದು ಮೈಲಿಗಲ್ಲಿನ ಸಾಧನೆ ಮಾಡಿದೆ ಎಂದು ಬೆಂಗಳೂರು  ಮೆಟ್ರೋದಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ