ಪೊಲೀಸ್ ಇಲಾಖೆಯ ಮುಖ್ಯಸ್ಥೆಯಾಗಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿ

ಮಂಗಳವಾರ, 31 ಅಕ್ಟೋಬರ್ 2017 (15:39 IST)
ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿಯಾಗಿ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥೆಯಾಗಿರುವ ನೀಲಮಣಿ ಎನ್. ರಾಜು ನೇಮಕಗೊಂಡಿದ್ದಾರೆ.
ನೀಲಮಣಿ ರಾಜು ಅವರೊಂದಿಗೆ, ಸಿಐಡಿ ವಿಭಾಗದ ಮುಖ್ಯಸ್ಥ ಎಚ್.ಸಿ.ಕಿಶೋರ್ ಚಂದ್ರಾ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾದ ಎಂ.ಎನ್.ರೆಡ್ಡಿ ಕೂಡಾ ಪೊಲೀಸ್ ಮಹಾನಿರ್ದೇಶಕ ಸ್ಥಾನದ ರೇಸ್‌‌ನಲ್ಲಿದ್ದರು. ನೀಲಮಣಿ 1983 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
 
ಏತನ್ಮಧ್ಯೆ, ಯಾವುದೇ ಕಾನೂನು ತೊಂದರೆಯಿಂದ ತಪ್ಪಿಸಲು ಹಿರಿಯತೆಯ ಕಾರಣದಿಂದಾಗಿ ನೀಲಮಣಿ ನೇಮಕಾತಿ ಅನಿವಾರ್ಯವಾಗಿತ್ತು.
 
10 ತಿಂಗಳ ಕಾಲ ಪೊಲೀಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಆರ್.ಕೆ. ದತ್ತಾ ಅವರಿಗೆ ಇಂದು ಕೋರಮಂಗಲದ ಕೆಎಸ್ಆರ್‌ಪಿ ಮೈದಾನದಲ್ಲಿ ಬೀಳ್ಕೋಡುಗೆ ನೀಡಲಾಯಿತು.
 
ಗೃಹ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಉನ್ನತ ಆಯ್ಕೆ ಸಮಿತಿ ಮೂರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ನಾಮನಿರ್ದೇಶನ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ