ಮೊಸಳೆ ಕಾಟದಿಂದ ಜೀವ ಕೈಯಲ್ಲಿ ಹಿಡಿದಿರೋ ನೆರೆ ಸಂತ್ರಸ್ಥರು

ಮಂಗಳವಾರ, 10 ಸೆಪ್ಟಂಬರ್ 2019 (16:56 IST)
ಪ್ರವಾಹ ಪರಿಸ್ಥಿತಿ ಗಡಿ ಜಿಲ್ಲೆಯ ಜನರ ಬದುಕನ್ನು ನರಕವಾಗಿಸಿದರೆ, ನೆರೆ ಇಳಿಯುತ್ತಿರುವ ಕೆಲವೆಡೆ ಮೊಸಳೆಗಳು ಜೀವ ಭಯ ಹುಟ್ಟಿಸುತ್ತಿವೆ.

ಜನ ವಸತಿಯಡೆ ಮೋಸಳೆಗಳು ಕಂಡು ಬರುತ್ತಿರೋದು ಜನರಲ್ಲಿ ಆತಂಕ ಉಂಟು ಮಾಡಿದೆ. ಕೃಷ್ಣಾ ನದಿಯ ಪ್ರವಾಹಕ್ಕೆ ನದಿಯ‌ ನೀರಿನ ಮಟ್ಟದಲ್ಲಿ ಏರಿಕೆಯಾದ‌ ಪರಿಣಾಮ ಆಹಾರ ಅರಸುತ್ತಾ ಜನವಸತಿ ಪ್ರದೇಶದತ್ತ ಮೊಸಳೆಗಳು ಬರುತ್ತಿವೆ. ಇವುಗಳನ್ನು ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.

ಸತ್ತಿ ಗ್ರಾಮದ ನಂದೇಶ್ವರ ರಸ್ತೆಗೆ ಹೊಂದಿಕೊಂಡಿರುವ ಅತ್ತಾರ ಜನವಸತಿಯಲ್ಲಿ ಮೊಸಳಗಳು ಕಂಡು ಬಂದಿವೆ. ತೋಟದಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಚಿತ್ರ ಧ್ವನಿ ಕೇಳಲಾರಂಭಿಸಿದೆ. ಆಗ ಅದನ್ನು ಗಮನಿಸಿದ ಜನವಸತಿ ಪ್ರದೇಶದ ಜನರು ಮೊಸಳೆನ್ನು ಗುರುತಿಸಿ ಹಿಂಬಾಲಿಸಿ ಹಗ್ಗದಿಂದ ಕಟ್ಟಿ ಹಾಕಿದ್ದಾರೆ.  

ಕೃಷ್ಣಾ ನದಿಯ ಪ್ರವಾಹದಿಂದ ಕಂಗಾಲಾಗಿರುವ ಜನರಿಗೆ ಹಾವು, ಕ್ರೀಮಿಕಿಟಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಈ ಮೊಸಳೆಗಳಂತ ದೊಡ್ಡ ಪ್ರಾಣಿಗಳಿಂದಾಗಿ ನದಿ ದಂಡೆಯ ಜನರು ಭಯಭೀತರಾಗಿದ್ದಾರೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ