ಬೆಂಗಳೂರು: ದರ್ಪದಲ್ಲಿ ಅಪ್ಪನನ್ನೇ ಮೀರಿಸುತ್ತಾಳೆ ಮಗಳು ಎಂದು ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಡಿಕೆಶಿಯವರ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ಒಂದು ವಿಡಿಯೋ.
ನಿನ್ನೆ ಐಶ್ವರ್ಯಾ ತಮ್ಮ ಒಡೆತನದ ಗ್ಲೋಬಲ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿರುವ ಯುವಜನೋತ್ಸವದ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಕರೆದಿದ್ದರು. ತಮ್ಮ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಡಿಕೆಶಿ ಪತ್ರಿಕಾಗೋಷ್ಠಿ ನಡೆಸಿದ್ದರು.
ಈ ವೇಳೆ ಹಿನ್ನಲೆಯಲ್ಲಿದ್ದ ಬೋರ್ಡ್ ನಲ್ಲಿ ಕನ್ನಡವೇ ಇರಲಿಲ್ಲ. ಇದನ್ನು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ಈ ವೇಳೆ ನೀವು ಹೇಳಿದ್ರಲ್ಲ ಇನ್ಮೇಲೆ ಸರಿ ಮಾಡ್ತೀನಿ. ನೋಡಿ ನಾವು ತಪ್ಪೇ ಮಾಡಲ್ಲ ಎಂದು ಹೇಳಲ್ಲ. ನಾವೂ ಮನುಷ್ಯರೇ. ಈಗ ನೀವು ಹೇಳಿದ್ರಲ್ಲಾ ಮುಂದಿನ ಸಲ ದೊಡ್ಡದಾಗಿ ಕನ್ನಡದಲ್ಲೇ ಬೋರ್ಡ್ ಹಾಕಿಸ್ತೇವೆ ಎಂದಿದ್ದಾರೆ.
ಅವರ ಮಾತು ಮತ್ತು ಹಾವಭಾವ ನೋಡಿದ ನೆಟ್ಟಗಿರು ಅಹಂಕಾರ, ದರ್ಪದಲ್ಲಿ ಅಪ್ಪನನ್ನೇ ಮೀರಿಸ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು, ಕೆಲವರು ಚಿಕ್ಕ ವಯಸ್ಸಿನಲ್ಲೇ ಅಧಿಕಾರ, ಹಣಬಲ ಎಲ್ಲವೂ ಇದ್ದರೆ ಹೀಗೇ ಆಗೋದು ಎಂದಿದ್ದಾರೆ.