ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಲೇ ಇದೆ. ಇಂದು ರಾಜ್ಯದಲ್ಲಿ ಮಳೆಯಿದೆಯೇ, ಲೇಟೆಸ್ಟ್ ಹವಾಮಾನ ವರದಿ ಏನು ಹೇಳುತ್ತದೆ ನೋಡಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಮತ್ತು ಮೊನ್ನೆ ಮಳೆಯಾಗಿತ್ತು. ಉಡುಪಿ ಜಿಲ್ಲೆಯಲ್ಲೂ ಮೊನ್ನೆ ಮಳೆಯಾಗಿತ್ತು. ರಾಜ್ಯದ್ಯಂತ ನಿರೀಕ್ಷೆಯಂತೇ ಉತ್ತಮವಾಗಿ ಬೇಸಿಗೆ ಮಳೆಯಾಗುತ್ತಿದೆ. ಹಾಗಿದ್ದರೂ ತಾಪಮಾನ ಏನೂ ಕಡಿಮೆಯಿಲ್ಲ.
ಈ ನಡುವೆ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಣ್ಣ ಮಳೆಯಾಗುವ ಸೂಚನೆಯಿದೆ. ಉಳಿದಂತೆ ಕೊಡಗು, ಹಾಸನ, ಮೈಸೂರು ಸೇರಿದಂತೆ ಬಹುತೇಕ ಕಡೆ ಬಿಸಿಲು ಮತ್ತು ಸ್ವಲ್ಪ ಮೋಡ ಕವಿದ ವಾತಾವರಣವಿರಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇಂದು ಮಳೆಯ ಸೂಚನೆಯಿಲ್ಲ. ನಿನ್ನೆಯೂ ವಿಪರೀತ ಬಿಸಿಲು ಕಂಡುಬಂದಿತ್ತು. ಇಂದೂ ಗರಿಷ್ಠ ತಾಪಮಾನ 32 ಡಿಗ್ರಿಯಷ್ಟಿರಲಿದೆ ಎಂದು ತಿಳಿದುಬಂದಿದೆ. ಉಳಿದಂತೆ ಬಿರು ಬಿಸಿಲಿನ ವಾತಾವರಣ ಮುಂದುವರಿಯಲಿದೆ.