ತಟಸ್ಥ ನಿಲುವಿನ ನಾಯಕರಿಗೆ ಬಿಎಸ್‌ವೈ ಕುಟುಂಬದ ಮೇಲೆ ಆಕ್ರೋಶವಿದೆ: ಬಸನಗೌಡ ಪಾಟೀಲ್

Sampriya

ಬುಧವಾರ, 4 ಡಿಸೆಂಬರ್ 2024 (17:27 IST)
ನವದೆಹಲಿ: ಕರ್ನಾಟಕ ಬಿಜೆಪಿಯಲ್ಲಿ ಆಗುತ್ತಿರುವ ಬಣ ಬಡಿದಾಟವನ್ನು ನಿಲ್ಲಿಸಲು ವರಿಷ್ಠರು ಹರಸಾಹಸ ಪಡುತ್ತಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮಾತನಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಅವರು ಇದೀಗ ದೆಹಲಿಗೆ ತೆರಳಿದ್ದಾರೆ.

ಭೇಟಿಗೂ ಮುನ್ನಾ ಮಾತನಾಡಿದ ಅವರು,  ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ. ಆರು ಪೇಜ್ ಉತ್ತರ ತಯಾರು ಮಾಡಿದ್ದೇನೆ. ಅದನ್ನು ನೀಡುತ್ತೇನೆ. ಜೊತೆಗೆ ವಿವರಣೆ ಕೊಡುತ್ತೇನೆ. ಪಕ್ಷದಲ್ಲಿ ತಟಸ್ಥ ನಿಲುವು ಹೊಂದಿರುವ ನಾಯಕರು ಇದ್ದಾರೆ. ಅವರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ. ಅವರು ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂದರು.

ಭ್ರಷ್ಟಾಚಾರ ಕುಟುಂಬದ ಕಪಿಮುಷ್ಠಿಯಿಂದ ಹೊರ ಬರಬೇಕು ಎನ್ನುವ ಭಾವನೆ ಎಲ್ಲರಲ್ಲಿ ಇದೆ. ಕೆಲವರು ತಟಸ್ಥ ನಿಲುವು ಹೊಂದಿದ್ದಾರೆ. ಯಾವ ಕಡೆಗೂ ವಾಲದ ರಾಷ್ಟ್ರೀಯ ನಾಯಕರನ್ನು ಕಳುಹಿಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮಾಹಿತಿ ಕಲೆಹಾಕಬೇಕು ಎಂದರು.

ವಿಜಯೇಂದ್ರ ಅವರು ಟೀಂ ಮಾಡಿಕೊಂಡು ನಿಷ್ಠಾವಂತ ಕಾರ್ಯಕರ್ತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ನಾನು ಬರೆದ ಪತ್ರದಲ್ಲಿ ಹೊಂದಾಣಿಕೆ ರಾಜಕೀಯ, ಕುಟುಂಬ ರಾಜಕೀಯ, ಹಿಂದುತ್ವದಲ್ಲಿ ಹೇಗೆ ರಾಜೀ ಆಗಿದೆ ಇರಬೇಕು ಎಂಬ ವಿಚಾರವನ್ನು ಬರೆದಿದ್ದೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ