ನಿಫಾ ಭೀತಿ.. ಕರುನಾಡಿನಲ್ಲಿ ಕಟ್ಟೆಚ್ಚರ..!

ಗುರುವಾರ, 14 ಸೆಪ್ಟಂಬರ್ 2023 (14:00 IST)
ಕೇರಳದಲ್ಲಿ ಮಾರಣಾಂತಿಕ ನಿಪಾ ವೈರಸ್‌ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೇರಳ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಹಾಗೂ ಜಿಲ್ಲಾ, ತಾಲೂಕು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ನಿಪಾ ವೈರಸ್‌ ಚಿಕಿತ್ಸೆಗೆ 10 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಕೇರಳದ ಕಲ್ಲಿಕೋಟೆಯಲ್ಲಿ ಇಬ್ಬರಿಗೆ ನಿಪಾ ವೈರಸ್‌ ಸೋಂಕು ದೃಢಪಟ್ಟಿದೆ. ಏಳು ಕಂಟೈನ್‌ಮೆಂಟ್‌ ಸೃಷ್ಟಿಸಿ ಆ ವ್ಯಾಪ್ತಿಯ ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುನ್ನೆಚ್ಚರಿಕೆ ವಹಿಸಲು ಬುಧವಾರ ಸಭೆ ನಡೆಸಿದ ಸಚಿವರು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಕ್ಷಿಣ ಕನ್ನಡದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳು ನಿಫಾ ಶಂಕಿತ ಪ್ರಕರಣಗಳನ್ನು ದಾಖಲಿಸಿಕೊಂಡು ಕೂಡಲೇ ಜಿಲ್ಲಾ ಕಣ್ಗಾವಲು ಕಚೇರಿ, ಘಟಕಕ್ಕೆ ತಿಳಿಸಬೇಕು. ಜತೆಗೆ ಆಮ್ಲಜನಕ, ಅಗತ್ಯ ಔಷಧ ಸಿದ್ಧಪಡಿಸಿಕೊಳ್ಳಬೇಕು. ಜ್ವರದ ಕಣ್ಗಾವಲು ಘಟಕಗಳನ್ನು ಸ್ಥಾಪಿಸಬೇಕು. ನಿಪಾ ರೋಗ ಲಕ್ಷಣಗಳಿಗೆ ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ