ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳ ಕರ್ಮಕಾಂಡ

ಸೋಮವಾರ, 31 ಜುಲೈ 2023 (15:47 IST)
ನಗರದಲ್ಲಿ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಹೇಳೋರಿಲ್ಲ,ಕೇಳೋರಿಲ್ಲ ಅನ್ನುವಂತಾಗಿದೆ.  ಜಯನಗರ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ.ಆಸ್ಪತ್ರೆಯಲ್ಲಿ ಅವ್ಯವಸ್ಥೆ ಇದೆ ಅಂತಾ ಸ್ವತಃ ಆರೋಗ್ಯ ಸಚಿವರು ಒಪ್ಪಿಕೊಂಡಿದ್ದಾರೆ.
 
ಸಚಿವರು ಬರ್ತಾರೆ ಅಂತಾ ಇಂದು ಆಸ್ಪತ್ರೆ ಫುಲ್ ಕ್ಲೀನ್ ಮಾಡಿದ್ದಾರೆ.ಆದ್ರೆ ಪ್ರತಿನಿತ್ಯ ರೋಗಿಗಳಿಗೆ  ಸೌಲಭ್ಯದ ಕೊರತೆ ಬಿಸಿ ತಟ್ಟುತ್ತಿದೆ.ಆಸ್ಪತ್ರೆಯಲ್ಲಿ ಡಾಕ್ಟರ್,ಸಿಬ್ಬಂದಿ ಕೊರತೆ ತಾಂಡವವಾಡುತ್ತಿದೆ.ಆಸ್ಪತ್ರೆ ಕಟ್ಟಡದಲ್ಲಿ  ಕಂಬಿಗಳು ಹೊರಬಿದ್ದಿದೆ.ಬೋರ್ಡ್, ಚೇರ್ ಎಲ್ಲದರ ಸ್ಥಿತಿ ಅಯೋಮಯವಾಗಿದೆ.ಕಾಟಚಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ಕೊಟ್ಟಿದ್ದಾರೆ.ಕ್ಯಾಮರಾಗಳ ಮುಂದಷ್ಟೇ ಭರವಸೆಯ ಮಾತು ಆಡಿದ್ದಾರೆ.ಆಸ್ಪತ್ರೆ ಅವ್ಯವಸ್ಥೆ ಗೊತ್ತಿದ್ರೂ ಕ್ರಮ ಯಾಕೆ ಆಗಿಲ್ಲ?ಬರೀ ಭೇಟಿ,ಪರಿಶೀಲನೆಗೆ ಎಲ್ಲಾ ಸರಿಯಾಗುತ್ತಾ?ಜಯನಗರ ಸರ್ಕಾರಿ ಆಸ್ಪತ್ರೆ ಲೋಪಗಳ ಬಗ್ಗೆ ಕ್ರಮ ಯಾವಾಗ? ಅಂತಾ ಆಸ್ಪತ್ರೆಯ ರೋಗಿಗಳು ಪ್ರಶ್ನೆ ಮಾಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ