ರಾಜಕೀಯಕ್ಕೆ ನಿಖಿಲ್ ಕುಮಾರ್: ಮತದಾರರಿಗೆ ಉಚಿತ ಟಿಕೆಟ್ 
 
	
		
			 
										    		ಶನಿವಾರ,  2 ಫೆಬ್ರವರಿ 2019 (15:04 IST) 
	    		     
	 
 
				
											ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ಹಾಗೂ ನಿಖಿಲ್ ಕುಮಾರ್ ಅವರನ್ನು ರಾಜಕೀಯಕ್ಕೆ ತರಲು ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.  ಹೀಗಾಗಿ ಜೆಡಿಎಸ್ ಮುಖಂಡರು ಹೊಸ ಪ್ಲಾನ್ ಮಾಡಿದ್ದು, ಜನರಿಗೆ ಉಚಿತ ಸಿನಿಮಾ ಟಿಕೆಟ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.  
									
				
											ಈಗಾಗಲೇ  ಬಿಡುಗಡೆಯಾಗಿರುವ ಸೀತಾರಾಮ  ಕಲ್ಯಾಣ  ಚಿತ್ರದ  ಟಿಕೆಟ್  ಗಳನ್ನು  ಮಂಡ್ಯ  ಕ್ಷೇತ್ರದಲ್ಲಿ  ಉಚಿತವಾಗಿ  ವಿತರಿಸಲಾಗಿದೆ  ಎಂದು  ತಿಳಿದು  ಬಂದಿದೆ . 
									
				
											ಸಿಎಂ  ಕುಮಾರಸ್ವಾಮಿಯವರು  ತಮ್ಮ  ಪುತ್ರ  ನಿಖಿಲ್  ಕುಮಾರ್  ಅವರನ್ನು  ತಾವು  ಅಧಿಕಾರದಲ್ಲಿದ್ದ  ಸಂದರ್ಭದಲ್ಲೇ  ರಾಜಕೀಯಕ್ಕೆ  ಕರೆತರಬೇಕೆಂಬ  ಅಭಿಲಾಷೆ  ಹೊಂದಿದ್ದಾರೆ. ಮುಂಬರುವ  ಲೋಕಸಭಾ  ಚುನಾವಣೆಯಲ್ಲಿ  ಮಂಡ್ಯ  ಕ್ಷೇತ್ರದಿಂದ  ಕಣಕ್ಕಿಳಿಸಲು  ಚಿಂತನೆ  ನಡೆಸಿದ್ದಾರೆನ್ನಲಾಗಿದೆ .  ಹೀಗಾಗಿ  ಮಂಡ್ಯ  ಲೋಕಸಭಾ  ಕ್ಷೇತ್ರದ  ವ್ಯಾಪ್ತಿಯಲ್ಲಿ  ನಿಖಿಲ್  ಕುಮಾರ್  ಪರ  ಪೂರಕ  ವಾತಾವರಣ  ಸೃಷ್ಟಿಸುವ  ಸಿದ್ಧತೆಗಳು  ನಡೆಯುತ್ತಿವೆ.   ಜ. 25 ರಂದು  ಬಿಡುಗಡೆಯಾಗಿದ್ದ  ನಿಖಿಲ್  ಕುಮಾರ್  ಅಭಿನಯದ  ‘ ಸೀತಾರಾಮ  ಕಲ್ಯಾಣ ’  ಚಿತ್ರದ  ಟಿಕೆಟ್  ಗಳನ್ನು  ಕ್ಷೇತ್ರದ  ಜನತೆಗೆ  ಉಚಿತವಾಗಿ  ವಿತರಿಸಲಾಗುತ್ತಿದೆ  ಎಂದು  ಹೇಳಲಾಗಿದೆ . 
									
				
											ಮಂಡ್ಯ  ಜಿಲ್ಲೆಯ  ಜೆಡಿಎಸ್  ಚುನಾಯಿತ  ಪ್ರತಿನಿಧಿಗಳಿಗೆ  ಈ  ಜವಾಬ್ದಾರಿ  ವಹಿಸಲಾಗಿದೆ  ಎಂದು  ಹೇಳಲಾಗಿದ್ದು ,  ಈ  ಹಿನ್ನಲೆಯಲ್ಲಿ  ಹಳ್ಳಿ  ಹಳ್ಳಿಗಳಿಗೆ  ತೆರಳಿ  ‘ ಸೀತಾರಾಮ  ಕಲ್ಯಾಣ ’ ದ  ಉಚಿತ  ಟಿಕೆಟ್  ನೀಡಿ  ವೀಕ್ಷಿಸುವಂತೆ  ಮನವಿ  ಮಾಡಲಾಗುತ್ತಿದೆ .  ಚಿತ್ರ ,  ಶತದಿನೋತ್ಸವ  ಪೂರೈಸುವವರೆಗೂ  ಮುಂದುವರಿಯಲಿದ್ದು ,  ಆ  ಬಳಿಕ  ಈ  ಸಮಾರಂಭವನ್ನು  ಅದ್ದೂರಿಯಾಗಿ  ಆಚರಿಸಲು  ತೀರ್ಮಾನಿಸಲಾಗಿದೆ  ಎಂದು  ಮೂಲಗಳು  ತಿಳಿಸಿದೆ . 
									
				
											
									
  
	
	
   
	
   
		
		
		
						ಆ್ಯಪ್ನಲ್ಲಿ ವೀಕ್ಷಿಸಿ x