ತನ್ನ ರಾಜ್ಯದಲ್ಲಿ ‘ಚಟ್ನಿ ಮ್ಯೂಸಿಕ್’ ಶುರು ಮಾಡಿಕೊಂಡಿರುವ ನಿತ್ಯಾನಂದ ಸ್ವಾಮಿ!
ಈ ಸಹೋದರಿಯರು ಅಲ್ಲಿ ನಿತ್ಯಾನಂದ ಸೃಷ್ಟಿಸಿರುವ ‘ಚಟ್ನಿ ಮ್ಯೂಸಿಕ್’ ಕಲಿಯುತ್ತಿದ್ದಾರಂತೆ! ಅಷ್ಟಕ್ಕೂ ಇದೇನು ಚಟ್ನಿ ಮ್ಯೂಸಿಕ್ ಅಂತೀರಾ? ಕೆರೆಬಿಯನ್ ಸಮುದಾಯ ಮತ್ತು ಭೋಜ್ ಪುರಿ ಸಂಗೀತವನ್ನು ಮಿಕ್ಸ್ ಮಾಡಿ ನಿತ್ಯಾನಂದ ಸೃಷ್ಟಿಸಿಕೊಂಡಿರುವ ಹೊಸ ಬಗೆಯ ಸಂಗೀತ ಇದಂತೆ. ಇದಕ್ಕೆ ನಿತ್ಯಾನಂದ ಚಟ್ನಿ ಮ್ಯೂಸಿಕ್ ಎಂದು ಹೆಸರಿಟ್ಟಿದ್ದಾನೆ!
ಇದೀಗ ಆತನ ಹಿಡಿತದಿಂದ ಸಹೋದರಿಯರನ್ನು ವಾಪಸ್ ಕರೆಸಿಕೊಳ್ಳಲು ಪೊಲೀಸರು ಶ್ರಮಿಸುತ್ತಿದ್ದಾರೆ. ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಪಡೆಯಲು ಪ್ರಯತ್ನ ನಡೆಸಿದ್ದಾರೆ.