ಯಾರಿಲ್ಲ..ಯಾರಿಲ್ಲ.. ಬಂಧನದಲ್ಲಿರುವ ದರ್ಶನ್ ನೋಡಲು ಕುಟುಂಬದವರು ಯಾರೂ ಬರಲಿಲ್ಲ
ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ದರ್ಶನ್ ತಮ್ಮ ಸಂಗಡಿಗರೊಂದಿಗೆ ಸೇರಿ ಹಲ್ಲೆ ಮಾಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂಬುದು ಆರೋಪವಾಗಿದೆ. ಈ ಸಂಬಂಧ ದರ್ಶನ್ ಜೊತೆಗೆ ಪವಿತ್ರಾ ಗೌಡ ಹಾಗೂ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿದೆ.
ಆದರೆ ಬಂಧನ ನಡೆದು ಹೆಚ್ಚು ಕಡಿಮೆ ಒಂದು ವಾರ ಕಳೆದರೂ ಇದುವರೆಗೆ ಯಾರೂ ದರ್ಶನ್ ರನ್ನು ನೋಡಲು ಬಂದಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದುವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ದರ್ಶನ್ ಸಹೋದರ, ತಾಯಿ ಅಥವಾ ಸಹೋದರಿ ಕೂಡಾ ಅವರನ್ನು ನೋಡಲು ಪೊಲೀಸ್ ಸ್ಟೇಷನ್ ಗೆ ಬಂದಿಲ್ಲ. ಇದಕ್ಕೆ ಮೊದಲು ಕೆಲವು ವರ್ಷಗಳ ಹಿಂದೆ ದರ್ಶನ್ ಪತ್ನಿ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದಾಗ ಅವರ ತಾಯಿ, ಸಹೋದರ ದಿನಕರ್ ಅವರನ್ನು ನೋಡಲು ಬಂದಿದ್ದರು. ಆದರೆ ಈಗ ದರ್ಶನ್ ತಮ್ಮ ತಾಯಿ, ಸಹೋದರನ ಜೊತೆಗೇ ವೈಮನಸ್ಯ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಯಾರೂ ಅವರನ್ನು ನೋಡಲೂ ಬಂದಿಲ್ಲ.