ಸರ್ಕಾರದಿಂದ ರಂಗಭೂಮಿ ಕಲಾವಿದರಿಗೆ ಅನುದಾನ ಇಲ್ಲ: ರಮೇಶ್
ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ವೋಟ್ ಬ್ಯಾಂಕಿಂಗ್ ಅಲ್ಲ. ಹಾಗಾಗಿ ಸರ್ಕಾರದಿಂದ ನಮಗೆ ಯಾವುದೇ ಸಹಾಯ ಇಲ್ಲ. ರಂಗಭೂಮಿ ಕಲಾವಿದರಿಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ನಾವು ವೋಟ್ ಬ್ಯಾಂಕಿಂಗ್ ಆಗಿದ್ದರೆ, ನಮಗೂ ಸರ್ಕಾರ ಅನುದಾನ ಕೊಡುತ್ತಿತ್ತು ಅನಿಸುತ್ತದೆ. ಸರ್ಕಾರ ಹೆಚ್ಚು, ಹೆಚ್ಚು ಅನುದಾನವನ್ನು ನಾಟಕ ಅಕಾಡೆಮಿ, ಕನ್ನಡ ಸಂಸ್ಕೃತಿ ಇಲಾಖೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.