ಬೆಂಗಳೂರು: ನಾಳೆ ದೇಶದಾದ್ಯಂತ ರಾಮ ನವಮಿ ಸಂಭ್ರಮದಿಂದ ಆಚರಿಸಲಾಗುತ್ತದೆ. ರಾಮನವಮಿ ಹಿನ್ನಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಿಸಲಾಗಿದೆ.
ಚೈತ್ರ ಮಾಸದ ಶುಕ್ಲ ಪಕ್ಷದ ಒಂಭತ್ತನೇ ದಿನವನ್ನು ರಾಮ ನವಮಿಯಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಿದೆ. ಪ್ರಾಣಿ ವಧೆಯನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಲಾಗುತ್ತಿದೆ. ಹೀಗಾಗಿ ನಾಳೆ ಮಾಂಸ ಸಿಗಲ್ಲ.
ಸಾಮಾನ್ಯವಾಗಿ ಪ್ರತೀ ಬಾರಿಯೂ ರಾಮನವಮಿ ಸಂದರ್ಭದಲ್ಲಿ ನಗರದಲ್ಲಿ ಮಾಂಸ ಮಾರಾಟ ನಿಷೇಧಿಸಲಾಗುತ್ತದೆ. ಅದೇ ರೀತಿ ಈ ಬಾರಿಯೂ ನಿಷೇಧ ಹೇರಲಾಗಿದೆ. ಬಿಬಿಎಂಪಿಯ ಪಶು ಸಂಗೋಪನಾ ಇಲಾಖೆ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದೆ. ಹಿಂದೂಗಳ ನಂಬಿಕೆ ಪ್ರಕಾರ ಇಂದು ಪ್ರಭು ಶ್ರೀರಾಮ ಹುಟ್ಟಿದ ದಿನ.
ಇಂದು ಚೈತ್ರ ಮಾಸ ನವರಾತ್ರಿಯೂ ಕೊನೆಗೊಳ್ಳುತ್ತಿದೆ. ಇಂದು ನಗರದಾದ್ಯಂತ ದೇವಾಲಯಗಳಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ಜೊತೆಗೆ ಬೀದಿ ಬೀದಿಯಲ್ಲಿ ಪಾನಕ, ಕೋಸಂಬರಿ ಹಂಚಿ ರಾಮ ನವಮಿಯನ್ನು ಸಂಭ‍್ರಮದಿಂದ ಆಚರಿಸಲಾಗುತ್ತದೆ. ಸ್ವತಃ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮಚಂದ್ರ ದಶರಥ ಮಹಾರಾಜನ ಪುತ್ರನಾಗಿ ಭೂಮಿಗೆ ಬಂದ ದಿನವಿಂದು. ಈ ಬಾರಿ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿ ಮಂದಿರ ಲೋಕಾರ್ಪಣೆಗೊಂಡಿರುವುದು ಸಂಭ್ರಮ ಹೆಚ್ಚಿಸಿದೆ.