ರಾಜಕೀಯ ಬೇಡವೇ ಬೇಡ ಎಂದ ಡಿ.ಕೆ.ಶಿವಕುಮಾರ್

ಭಾನುವಾರ, 9 ಆಗಸ್ಟ್ 2020 (19:26 IST)
ರಾಜಕೀಯ ಬೇಧ ಮರೆತು ಎಲ್ಲಾ ಪಕ್ಷಗಳ ನಾಯಕರು ಒಂದಾಗಿ ಶಾಶ್ವತವಾದ ಪರಿಹಾರ ಕ್ರಮಗಳ ಯೋಜನೆಯನ್ನು ರೂಪಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ.


ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪ ಸಂಬಂಧಿತ ರಾಜಕೀಯ ಬೇಧ ಮರೆತು ಎಲ್ಲಾ ಪಕ್ಷಗಳ ನಾಯಕರು ಒಂದಾಗಿ ಶಾಶ್ವತವಾದ ಪರಿಹಾರ ಕ್ರಮಗಳ ಯೋಜನೆಯನ್ನು ಸಕಾ೯ರದ ಮೂಲಕ ಜಾರಿಗೊಳಿಸಬೇಕಾಗಿದೆ ಎಂದು  ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಕೊಡಗಿಗೆ ಶಾಶ್ವತ ಯೋಜನೆಗಾಗಿಯೇ ವಾಷಿ೯ಕ ಬಜೆಟ್ ನಲ್ಲಿ ಪ್ರತ್ಯೇಕ  ಪ್ಯಾಕೇಜ್ ನ್ನು ಬಜೆಟ್ ನಲ್ಲಿ  ಒದಗಿಸಲು  ಒತ್ತಾಯಿಸಲಾಗುತ್ತದೆ ಎಂದೂ ಶಿವಕುಮಾರ್ ಹೇಳಿದ್ದಾರೆ.

ಭೂಕುಸಿತ ಸಂಭವಿಸಿದ ತಲಕಾವೇರಿ ಪ್ರದೇಶಕಕ್ಕೆ ಭೇಟಿ ನೀಡಿ  ಸ್ಥಳದಲ್ಲಿ ನಡೆಯುತ್ತಿದ್ದ ಅಚ೯ಕರ ಕುಟುಂಬದ ನಾಲ್ವರ ಮೖತದೇಹ ಪತ್ತೆಕಾಯ೯ಚರಣೆ ವೀಕ್ಷಿಸಿದ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ದೇಶಕ್ಕೆ ಅಪ್ರತಿಮ ಸೈನಿಕರನ್ನು ನೀಡಿದ, ಜೀವನದಿ ಕಾವೇರಿಯ ತವರು, ಕನಾ೯ಟಕ ರಾಜ್ಯಕ್ಕೆ ವಿಲೀನಗೊಂಡ ಸಂದಭ೯ದ ಅಂದಿನ ಸಂದಭ೯ದಲ್ಲಿಯೇ 10 ಲಕ್ಷ ರೂ. ತೆರಿಗೆ ನೀಡಿದ ಕೊಡಗಿನ ರಕ್ಷಣೆಗೆ ಎಲ್ಲರೂ ಮುಂದಾಗಬೇಕಾಗಿದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ