ಯಾವುದೇ ನೋಟಿಸ್ ಬಂದಿಲ್ಲ- ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ಗುರುವಾರ, 15 ಫೆಬ್ರವರಿ 2018 (10:56 IST)

ಐಟಿ ಇಲಾಖೆಯಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿನ ನಿವಾಸದಲ್ಲಿ ಮಾತನಾಡಿದ ಅವರು, ಹಳ್ಳಿಯಿಂದ ಬಂದರೂ ನಾನು ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿಲ್ಲ. ವರದಿ ನೀಡಲು ಐಟಿ ಇಲಾಖೆ ಅವಕಾಶಗಳಿವೆ. ನಾವು ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ ಎಂದಿದ್ದಾರೆ.

ನಾನು ಚೀಟಿ ಹರಿದು ಹಾಕಿದ್ದಕ್ಕೆ ಸಾಕ್ಷಿ ಇದೆಯಾ, ನೋಟಿಸ್ ಬಂದರೆ ಕಾನೂನು ಮೂಲಕವೇ ಉತ್ತರ ನೀಡುತ್ತೇನೆ. ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.

ನಾನು ಚೀಟಿ ಹರಿದ ವಿಚಾರ ಬಿಜೆಪಿ ನಾಯಕರಿಗೆ ಹೇಗೆ ತಿಳಿಯಿತು? ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ಈ ರೀತಿ ಸುದ್ದಿ ಹಬ್ಬುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ