ಕೊನೆಗೂ ರಾಕಿಂಗ್ ಸ್ಟಾರ್ ಯಶ್ ಗೆ ಸಿಕ್ಕಳು ಮುದ್ದಿನ ಅರಗಿಣಿ
ಗುರುವಾರ, 15 ಫೆಬ್ರವರಿ 2018 (09:41 IST)
ಬೆಂಗಳೂರು: ಪ್ರೇಮಿಗಳ ದಿನ ಆಚರಿಸಲು ಪತ್ನಿ ರಾಧಿಕಾ ಪಂಡಿತ್ ಜತೆ ಇರಲು ಅಮೆರಿಕಾಗೆ ಹಾರಿದ ರಾಕಿಂಗ್ ಸ್ಟಾರ್ ಯಶ್ ಗೆ ಕೊನೆಗೂ ಮುದ್ದಿನ ಪತ್ನಿ ಜತೆಯಾಗಿದ್ದಾರೆ.
ಗಂಡನ ಜತೆ ಪ್ರೇಮಿಗಳ ದಿನ ಆಚರಿಸಿದ ರೊಮ್ಯಾಂಟಿಕ್ ಫೋಟೋವನ್ನು ರಾಧಿಕಾ ತಮ್ಮ ಸಾಮಾಜಿ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಕಡೆಗೂ ಗಂಡ ಜತೆಯಾದ ಖುಷಿ ಅವರ ಮೊಗದಲ್ಲಿ ಎದ್ದು ಕಾಣುತ್ತಿದೆ.
ಕೆಲವು ದಿನಗಳ ಹಿಂದೆಯೇ ರಾಧಿಕಾ ತಮ್ಮ ಚಿಕಾಗೋದಲ್ಲಿರುವ ತಮ್ಮಅಣ್ಣನ ಮನೆಗೆ ತೆರಳಿದ್ದರು. ಅಣ್ಣನ ಮುದ್ದಾದ ಮಗಳ ಜತೆ ಆಟವಾಡುವ ಫೋಟೋ ವೈರಲ್ ಆಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ