ಯಾರ ಎದುರೂ ಮಂಡಿಯೂರಿ ಕೂರಲಾರೆ: ನ್ಯಾಟೊ ಸದಸ್ಯತ್ವಕ್ಕೆ ಒತ್ತಾಯಿಸೋದಿಲ್ಲ ಎಂದ ಝೆಲೆನ್ಸ್ಕಿ

ಬುಧವಾರ, 9 ಮಾರ್ಚ್ 2022 (20:21 IST)
ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ನೀಡುವಂತೆ ಇನ್ನು ಮುಂದೆ ಒತ್ತಾಯ ಮಾಡುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ನೀಡುವ ಬಗ್ಗೆ ನಾನಿನ್ನು ಮೌನ ತಾಳುವುದು ಲೇಸು. ಸದಸ್ಯತ್ವ ನೀಡುತ್ತೇವೆ ಎಂದು ಹೇಳಿದ್ದು ಬರೀ ಮಾತಿಗಷ್ಟೇ, ಯಾವ ಸಿದ್ಧತೆಯೂ ಆಗಿರಲಿಲ್ಲ. ರಷ್ಯಾ ಉಕ್ರೇನ್ ವಿರುದ್ಧ ಸಮರ ಸಾರಲು ಸಾಕಷ್ಟು ಕಾರಣಗಳಿವೆ. ಆದರೆ ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ಸಿಗುವುದು ಇದಕ್ಕೆ ಪ್ರಮುಖ ಕಾರಣ.ರಷ್ಯಾ ಆಕ್ರಮಣ ಆರಂಭಿಸಿದ ನಂತರ ನ್ಯಾಟೋ ಉಕ್ರೇನ್‌ನಿಂದ ಅಂತರ ಕಾಯ್ದುಕೊಂಡಿದೆ. ಬಹಿರಂಗವಾಗಿ ಸಹಾಯ ಕೇಳಿದ್ದೇನೆ. ಆದರೂ ಸ್ಪಂದಿಸಿಲ್ಲ ಎಂದಿದ್ದಾರೆ.
ನ್ಯಾಟೋ ಒಕ್ಕೂಟಕ್ಕೆ ರಷ್ಯಾ ಎದುರು ಹಾಕಿಕೊಳ್ಳಲು, ಅದರ ವಿರುದ್ಧ ಹೋರಾಡಲು ಭಯ ಇದೆ. ನಾನೊಂದು ದೇಶದ ಅಧ್ಯಕ್ಷ. ಯಾವುದೇ ವಿಚಾರಕ್ಕೆ ಯಾರ ಎದುರೂ ಮಂಡಿಯೂರಿ ಕೂರಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ