ದಂದೂರು ಲಾಂಚ್ ನೌಕರರಿಗೆ ವರ್ಷದಿಂದ ವೇತನವಿಲ್ಲ ಬಡಪಾಯಿ ನೌಕರರ ಮೇಲೆ ಅಧಿಕಾರಿಗಳ ಜಬರ್ದಸ್ತ್

ಮಂಗಳವಾರ, 13 ಸೆಪ್ಟಂಬರ್ 2022 (17:18 IST)
ಸಾವಿರಾರು ಪ್ರವಾಸಿಗರು, ವಿದ್ಯಾರ್ಥಿಗಳು, ಸ್ಥಳೀಯರನ್ನು ಸುರಕ್ಷಿತವಾಗಿ ದಡ ಸೇರಿಸುವ 'ಅಂಬಿಗ'ರಾಗಿ ಕಾರ್ಯ ನಿರ್ವಹಿಸುವ ಸಿಗಂದೂರು ಲಾಂಚ್‌ನ ಅರೆಕಾಲಿಕ ನೌಕರರು ವೇತನ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಈ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಅವರ ಬದುಕು ದುಸ್ತರವಾಗಲು ಕಾರಣವಾಗಿದೆ.
 
ತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಸಿಗಂದೂರು, ಹಲ್ಕೆ-ಮುಪ್ಪಾನೆ, ನಿಟ್ಟೂರು ಬಳಿಯ ಹಸಿರುಮಕ್ಕಿ ಪ್ರದೇಶದ ಕಡವು ಕೇಂದ್ರಗಳ ಬಳಿ ಸೇರಿದಂತೆ ಒಟ್ಟು 7 ಲಾಂಚ್‌ಗಳಿವೆ. ಈ ಕಡವಿನಲ್ಲಿ (ಲಾಂಚ್) ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಸಿಬ್ಬಂದಿ ಸೇರಿ 19 ಮಂದಿ ನೌಕರರಿಗೆ ಒಂದು ವರ್ಷದಿಂದ ವೇತನ ನೀಡದೆ ಅಧಿಕಾರಿಗಳು ಶೋಷಿಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ನೌಕರರು ಹೊರಗಿನವರೊಂದಿಗೆ ಚರ್ಚಿಸಬಾರದು. ಈ ವಿಚಾರದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರೆ ಕರ್ತವ್ಯ ಲೋಪದ ಹಣೆಪಟ್ಟಿ ಕಟ್ಟಿ ಕೆಲಸದಿಂದ ಕಿತ್ತು ಹಾಕಲಾಗುವುದು ಎಂದು ಬೆದರಿಕೆಯೊಡ್ಡಲಾಗಿದೆ' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನೌಕರರೊಬ್ಬರು 'ತಿಳಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ