ಯಾವುದೇ ಮಾಟಮಂತ್ರಗಳೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ - ಸಚಿವ ಕೆ.ಎನ್‌. ರಾಜಣ್ಣ

geetha

ಭಾನುವಾರ, 25 ಫೆಬ್ರವರಿ 2024 (19:41 IST)
ತುಮಕೂರು :ನನಗೂ ಹಾಸನಕ್ಕೂ ಏನು ಸಂಬಂಧವಿದೆಯೋ ಗೊತ್ತಿಲ್ಲ. ನನಗೆ ಹಾಸನದ ಉಸ್ತುವಾರಿ ನೀಡಿರುವುದರಿಂದ   ನನ್ನ ಅಭಿಮಾನಿಗಳು ಹೆದರಿಕೊಂಡು ಬಿಟ್ಟಿದ್ದರು. ಸಾರ್ ನೀವು ಹಾಸನಕ್ಕೆ ಹೋಗುವುದು ಬೇಡ . ಅಲ್ಲಿ ವಾಮಾಚಾರ ಮಾಡ್ತಾರೆ  ಎಂದಿದ್ದರು .ಆದರೆ ನಾನು ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ. ನಾವು ಉಗ್ರನರಸಿಂಹಸ್ವಾಮಿ ಭಕ್ತರು, ಹಾಗಾಗಿ ನಮಗೆ ಯಾವ ವಾಮಚಾರನೂ ತಾಕೋದಿಲ್ಲ ಎಂದು ಹೇಳಿದ್ದಾಗಿ ಕೆ.ಎನ್‌. ರಾಜಣ್ಣ ನುಡಿದರು. 

 ಲೋಕಸಭಾ ಚುನಾವಣೆಗೆ ನನಗೆ ಹಾಸನದ ಉಸ್ತುವಾರಿ ಹೊಣೆಯನ್ನು ನೀಡಿರುವುದು ನನ್ನ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದರೆ ದೇವೇಗೌಡರ ಯಾವುದೇ ಮಾಟಮಂತ್ರಗಳೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಕೆ.ಎನ್‌. ರಾಜಣ್ಣ ಹೇಳಿದ್ದಾರೆ. ಭಾನುವಾರ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ನಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಯಾವ ವಾಮಾಚಾರ ಮಾಟಮಂತ್ರಗಳಿಗೂ ನಾನು ಹೆದರುವುದಿಲ್ಲ ಎಂದರು. 

ಜೊತೆಗೆ,  ಯಾರಾದ್ರೂ ವಾಮಾಚಾರ ಮಾಡೋರು ಇದ್ರೆ ಸ್ವತಃ ನಾನೇ ಕೂತ್ಕೊಳ್ತೀನಿ.  ನನ್ನ ಮೇಲೆ ವಾಮಾಚಾರ ಮಾಡಲಿ ಎಂದು ಸವಾಲು ಹಾಕಿದ್ದಾಗಿಯೂ ಹೇಳಿಕೊಂಡ ರಾಜಣ್ಣ, ಹಾಗಂತ ವಾಮಾಚರ ತಗುಲುವುದಿಲ್ಲ ಅನ್ಕೋಬೇಡಿ. ನಾನು ಹಾಸನಕ್ಕೆ ಕುಣಿಗಲ್ ಮೂಲಕ ಮೊದಲ ದಿನ ಹೋಗುತ್ತಿದ್ದಾಗ. ಕುಣಿಗಲ್ ನಲ್ಲಿ ಪಟಾಕಿ ಸಿಡಿದು, ಕಣ್ಣಿಗೆ ಏಟಾಗಿತ್ತು. ಡಾಕ್ಟರ್ ಕಣ್ಣು ಕ್ಲೀನ್ ಮಾಡಿ ಹಾಸನಕ್ಕೆ ಹೋಗುವುದು ಬೇಡ ಎಂದಿದ್ದರು. ಹೆದರಿ ಹಾಸನಕ್ಕೆ ಬಂದಿಲ್ಲ ಎಂಬ ಸಂದೇಶ ರವಾನೆಯಾಗಬಾರದು ಎಂಬ ಹಠದಿಂದ ಎರಡೂ ಕಣ್ಣು ಹೋದರೂ ಪರವಾಗಿಲ್ಲ ಎಂದು ಧೈರ್ಯವಾಗಿ ಹಾಸನಕ್ಕೆ ಹೋಗಿದ್ದೆ ಎಂದು ರಾಜಣ್ಣ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ