ಕೊವಿಡ್ ಗೆ ಹೆದರಿ ವಿಷ ಸೇವಿಸಿ ಅಮ್ಮ-ಮಗ ಆತ್ಮಹತ್ಯೆ
ಕೊರೋನಾ ತಗುಲಬಹುದೆಂಬ ಭಯದಿಂದ 23 ವರ್ಷ ತಾಯಿ, ಮೂರು ವರ್ಷದ ಮಗ ಮತ್ತು ಇತರ ಮೂವರು ಸದಸ್ಯರು ವಿಷ ಸೇವಿಸಿದ್ದಾರೆ. ಇವರಲ್ಲಿ ಅಮ್ಮ-ಮಗ ಸಾವನ್ನಪ್ಪಿದ್ದಾರೆ.
ಮಹಿಳೆಯ ಪತಿ ಡಿಸೆಂಬರ್ ನಲ್ಲಿ ಸಾವನ್ನಪ್ಪಿದ್ದ. ಪತಿಯ ಸಾವಿನ ದುಃಖದಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಹಿಳೆ ಈ ಕೃತ್ಯಕ್ಕೆ ಮುಂದಾಗಿದ್ದಳು. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.