ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಒಂಭತ್ತು ಜನರ ಜೀವೋನ್ಮರಣ ಹೋರಾಟ..!

ಭಾನುವಾರ, 13 ಆಗಸ್ಟ್ 2023 (19:29 IST)
ಬಿಬಿಎಂಪಿ ಲ್ಯಾಬ್ ನಲ್ಲಿ ನಡೆದ ಅಗ್ನಿ ಅವಘಢದಿಂದ ಒಂಭತ್ತು ಜನ ಆಸ್ಪತ್ರೆ ಪಾಲಾಗಿದ್ದಾರೆ.. ಘಟನೆ ಬೆನ್ನಲ್ಲೇ ಇದಕ್ಕೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯೆಯೇ ಕಾರಣ ಅಂತಾ ಶಂಕೆ ವ್ಯಕ್ತಪಡಿಸಲಾಗಿತ್ತು.. ಆದ್ರೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ರು ಅಂತಾ ಊಹೆ ಮಾಡಿರ್ಲಿಲ್ಲ.. ಎಂಜಿನಿಯರ್ ಮಾಡ್ಬೇಕಿದ್ದ ಕೆಲಸ ಒಂಭತ್ತನೇ ತರಗತಿ ಓದಿದ್ದವ ಮಾಡಿದ ಯಡವಟ್ಟು ಇವತ್ತು ಈ ಮಟ್ಟಿಗೆ ಅವಘಡ ಆಗಿದೆ.. ಆತ ಮಾಡಿದ್ದ ಸಣ್ಣ ತಪ್ಪು ಇವತ್ತು ಈ ಎಫೆಕ್ಟ್.ಬಿಬಿಎಂಪಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಮೊನ್ನೆ ನಡೆದ ಅಗ್ನಿ ಅವಘಢದಿಂದ ಒಂಭತ್ತು ಜನ ಜೀವೋನ್ಮರಣ ಹೋರಾಟ ನಡೆಸ್ತಿದ್ದಾರೆ.. ಅಷ್ಟರಲ್ಲಿ ಚೀಫ್ ಎಂಜಿನಿಯರ್ ಶಿವಕುಮಾರ್, ಇಇ ಕಿರಣ್, ಆಪರೇಟರ್ ಜ್ಯೋತಿ ಈ ಮೂರು ಜನರ ಕಂಡಿಷನ್ ಸ್ವಲ್ಪ ಕ್ರಿಟಿಕಲ್ ಆಗಿದೆ.. 25-40% ಅವರ ದೇಹದ ಭಾಗ ಸುಟ್ಟು ಹೋಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.. ಈ ಘಟನೆ ಆದ ಬೆನ್ನಲ್ಲೇ ತನಿಖೆ ಶುರುಮಾಡಿದ್ದ ಹಲಸೂರ್ ಗೇಟ್ ಪೊಲೀಸರು ಅಧಿಕಾರಿಗಳ ನಿರ್ಲಕ್ಷ್ಯ ಕನ್ಫರ್ಮ್ ಅಂತಾ ಶಂಕೆ ವ್ಯಕ್ತಪಡಿಸಿದ್ರು.. ಈ ವಿಚಾರ ತನಿಖೆ ವೇಳೆ ಕನ್ಫರ್ಮ್ ಆಗಿದ್ದು ಬಿಬಿಎಂಪಿಯ ಮೂವರು ಸಿಬ್ಬಂದಿಯನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಸ್ಫೋಟಕ ವಿಷ್ಯ ಹೊರ ಬಿದ್ದಿದೆ.

ರೋಡ್ ಮೆಟೀರಿಯಲ್ಸ್ ನ ಕ್ವಾಲಿಟಿ ಚೆಕ್ ಮಾಡೋವಾಗ ಬೆನ್ಷನ್ ಅನ್ನೋ ಕೆಮಿಕಲ್ ನಿಂದ ಬೆಂಕಿ ಹೊತ್ತಿದ್ದ ಪರಿಣಾಮ ದೊಡ್ಡ ಅವಘಢ ಸಂಭವಿಸಿತ್ತು.. ಆದ್ರೆ ಜವಾಬ್ದಾರಿತ ಲ್ಯಾಬ್ ಪರಿಶೀಲನೆ ಮಾಡ್ಬೇಕಿದ್ದು ಚೀಫ್ ಎಂಜಿನಿಯರ್ ಗಳು..ಕಂಪ್ಲೀಟ್ ಫಾರೆನ್ಸಿಕ್ ನಾಲೇಜ್ ಇರೋರು ಇಂತಹ ಟೆಸ್ಟ್ ಮಾಡ್ಬೇಕು.. ಆದ್ರೆ ಹನ್ನೊಂದನೇ ತಾರೀಖು ರೋಡ್ ಟಾರ್ ಲ್ಯಾಬ್ ಟೆಸ್ಟ್ ಮಾಡಿದ್ದು ಕೇವಲ ಒಂಭತ್ತನೇ ತರಗತಿ ಓದಿದ್ದ ಡಿ ಗ್ರೂಪ್ ನೌಕರ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ..ಅವತ್ತು ಎಲ್ಲಾ ಮೇಲಾಧಿಕಾರಿಗಳು ಲ್ಯಾಬ್ ನ ಮೇಲಿನ‌ಮಹಡಿಯಲ್ಲಿ ಸಭೆ ಮಾಡ್ತಿದ್ರು.. ಲ್ಯಾಬ್ ನಲ್ಲಿ ಸಹಾಯಕ್ಕೆ ಅಂತಾ ನೇಮಿಸಿಕೊಂಡಿದ್ದ ಡಿ ಗ್ರೂಪ್ ನ ನೌಕರ ಸುರೇಶ್ ಎಂಬಾತ ಅವತ್ತು ಟೆಸ್ಟ್ ಮಾಡಿರೋ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ.. ಆತನಿಗೆ ಬೆನ್ಷನ್ ತೀವ್ರತೆಯ ಪರಿಣಾಮ ಇಲ್ಲದೆ ಅದನ್ನ ಬಳಿಸಿರೋ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು.. ಅಲ್ಲದೇ ಬೆಂಕಿ ಆರಿಸೋಕೆ ಮಣ್ಣು ಅಥವಾ ಮರಳು, ಫೋರಿನ್ ನಂತಹ ವಸ್ತು ಬಳಸಿ ಬೆಂಕಿ ಆರಿಸೋದು ಬಿಟ್ಟು ನೀರು ಹಾಕಿದ್ದಾನೆ.. ಪರಿಣಾಮ ಬೆಂಕಿ ಮತ್ತಷ್ಟು ಜೋರಾಗಿ ಹೊತ್ತಿಕೊಂಡಿದ್ದು ಮೇಲಿದ್ದವರೆಲ್ಲಾ ಹೊರ ಬರೋಷ್ಟರಲ್ಲಿ ಒಂಭತ್ತು ಜನರಿಗೆ ತಾಕಿದೆ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ