ಆಸ್ಪತ್ರೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಜೀವನ್ಮರಣ ಹೋರಾಟ

ಭಾನುವಾರ, 13 ಆಗಸ್ಟ್ 2023 (17:07 IST)
ಮೊನ್ನೆ ಬಿಬಿಎಂಪಿ ಆವರಣದ ಗುಣನಿಯಂತ್ರಣ ಲ್ಯಾಬ್ ನಲ್ಲಿನಡೆದ ಬೆಂಕಿ ಅವಘಡದಲ್ಲಿ ಸಿಲುಕಿದ 9 ಜನ ಬಿಬಿಎಂಪಿ ಸಿಬ್ಬಂದಿಗಳಿಗೆ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆನಡಿತಾಯಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.ಮೊನ್ನೆ ಬಿಬಿಎಂಪಿಯ ಮುಖ್ಯ ಕಚೇರಿಯ ಗುಣ ನಿಯಂತ್ರಣ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು. ಬೆಂಕಿಯ ತೀವ್ರತೆಗೆ  9 ಜನ ಸಿಬ್ಬಂದಿಗಳು ಬೆಂಕಿಯಲ್ಲಿ ಬೆಂದು ಗಂಭೀರವಾಗಿ ಗಾಯಗೊಂಡಿದ್ದಾರೆ, ಗಾಯಾಳುಗಳಿಗೆ ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌‌ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಾಯಗೊಂಡಿದ್ದ 9 ಜನರಲ್ಲಿ  ಆರೂ ಜನರಲ್ಲಿ ಚೆತರಿಕೆ ಕಂಡಿದ್ದು, ಮುರೂ ಜನರ ಸ್ಥಿತಿ ಗಂಬಿರವಾಗಿದೆ. ಜ್ಯೋತಿ, ಕಿರಣ್,ಹಾಗೂ ಶಿವಕುಮಾರ್ ಆರೋಗ್ಯದಲ್ಲಿ ಚೆತರಿಕೆ ಕಂಡಿಲ್ಲ ಹಿಗಾಗಿ ಮೂರೂ ಜನರ ಸ್ಥಿತಿ ಚಿಂತಾಜನಕವಾಗಿದೆ. ಕಿರಣ್ ಗೆ ನಿನ್ನೆ ಡಯಾಲಿಸಿಸ್ ಆಗಿದ್ದು ಇನ್ನೊಮ್ಮೆ ಡಯಾಲಿಸಿಸ್ ಆಗಬೇಕಿದೆ. ಶಿವಕುಮಾರ್ ಗೆ ಉಸಿರಾಟದ ಸಮಸ್ಯೆಯಿದೆ, ಉಳಿದ ಆರು ಜನ್ರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿಲ್ಲ ಹಿಗಾಗಿ ಇನ್ನೊಂದು ವಾರ ಐಸಿಯುನಲ್ಲಿ ಇಟ್ಟುಕೊಳ್ತೇವೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಡೀನ್ ರಮೇಶ್ ಕೃಷ್ಣ ತೀಳಿಸಿದ್ದಾರೆ.

ಇನ್ನೂ. 9 ಜನ ಸಿಬ್ಬಂದಿಗಳಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದ್ದು, ಒಂದು ಸ್ಪೇಷಲ್  ತಂಡವನ್ನು ರಚನೆ ಮಾಡಲಾಗಿದೆ, ಇನ್ನೂ ಗಾಯಗೊಂಡಿರುವ ಬಿಬಿಎಂಪಿ ಸಿಬ್ಬಂದಿಗಳನ್ನು  48 ಗಂಟೆಗಳ ಕಾಲ ಅಬ್ಸರ್ವೇಷನ್‌ನಲ್ಲಿ ಇರಿಸಲಾಗಿದೆ. ಇವರಲ್ಲಿ ಇಂಜಿನಿಯರ್ ಶಿವಕುಮಾರ್ ಹಾಗೂ ಜ್ಯೋತಿ ಅವರ ಕಂಡೀಷನ್ ಕೊಂಚ ಸಿರೀಯಸ್ ಆಗಿದ್ದು ಇನ್ನೂಳಿದವರಿಗೆ ಸಣ್ಣ ಪ್ರಮಾಣದಲ್ಲಿ ಶ್ವಾಸಕೋಶಕ್ಕೆ ಹಾನಿಯಾಗಿದ್ದು, ಯಲ್ಲರಿಗೂ ಚಿಕೀತ್ಸೆ ನೀಡಲಾಗುತ್ತಿದೆ. ಇನ್ನೂ ಗಾಯಾಳುಗಳನ್ನು ನೋಡಲು ಕುಟುಂಬಸ್ಥರು ಆಸ್ಪತ್ರೆಗೆ ಬಂದಿದ್ದು ಗಾಯಾಳುಗಳ ಆರೋಗ್ಯದಲ್ಲಿ ಕೊಂಚ ಚೆತರಿಕೆ ಕಂಡಿದೆ, ನಿನ್ನ ಮಾತನಾಡಿಸಿದ್ದೆವೆ ಸ್ವಲ್ಪಮಟ್ಟಿಗೆ ಊಟ ತಿಂಡಿ ಸೆವನೆ ಮಾಡುತ್ತಿದ್ದಾರೆ. ಐಸಿಯು ನಲ್ಲಿರೋದ್ರಿಂದ ನೋಡೋದಕ್ಕೆ ನಮಗೆ ಓಳಗಡೆ ಹೊಗಲ್ಲೂ ಅವಕಾಶ ನೀಡುತ್ತಿಲ್ಲ ಕುಟುಂಬಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ