ಸಾರಿಗೆ ಇಲಾಖೆಯಿಂದಲೇ ಓಲಾ, ಊಬರ್‌ಗಳ ದರ ನಿಗಧಿ..!

ಮಂಗಳವಾರ, 18 ಅಕ್ಟೋಬರ್ 2022 (18:55 IST)
ಸಾರಿಗೆ ಇಲಾಖೆಯ ನಿಯಮಗಳನ್ನ ಉಲ್ಲಂಘಿಸಿ, ಗ್ರಾಹಕರಿಂದ ದುಪ್ಪಟ್ಟು ಹಣ ಪೀಕ್ತಿದ್ದ, ಓಲಾ, ಊಬರ್ ಕಂಪನಿಗಳಿಗೆ ರಾಜ್ಯ ಹೈಕೋರ್ಟ್ ಚಾಟಿ ಬೀಸಿದೆ. ಕೋರ್ಟ್ ಸೂಚನೆಯಂತೆ ನವೆಂಬರ್ ೭ನೇ ತಾರೀಕಿನೊಳಗೆ ಸಾರಿಗೆ ಇಲಾಖೆ ಓಲಾ, ಊಬರ್ ಗಳಿಗೆ ದರ ನಿಗದಿ ಮಾಡಲಿದೆ. ಇದೇ ಶುಕ್ರವಾರ, ಓಲಾ, ಊಬರ್ ಕಂಪನಿಗಳ ಪ್ರತಿನಿಧಿಗಳನ್ನ ಸೇರಿದಂತೆ ಆಟೋ ಯೂನಿಯನ್‌ಗಳು, ಚಾಲಕರು, ಸಾರ್ವಜನಿರ ಅಭಿಪ್ರಾಯ ಪಡೆದು ದರ ಮಾಡಲಿದೆ. ಇಲ್ಲಿ ನಿರ್ಧಾರವಾಗುವ ದರದ ಬಗ್ಗೆ ಕೋರ್ಟ್‌ಗೆ ಸಾರಿಗೆ ಇಲಾಖೆ ವರದಿ ನೀಡಲಿದೆ.
 
ಸರ್ಕಾರದಿಂದ ಓಲಾ ಉಬರ್ ಗೆ ಎಷ್ಟು ದರ ನಿಗಧಿಯಾಗಬಹುದು ಅಂತಾ ನೋಡುವುದಾದ್ರೆ
 
- ಸರ್ಕಾರದ ದರ : ೦-೨ ಕಿಲೋ ಮೀಟರ್‌ಗೆ ೩೦ ರೂ ದರ. ೨ ಕೀ.ಮೀ ಮೇಲೆ ಪ್ರತಿ ಕೀಲೋ ಮೀಟರ್‌ಗೆ ೧೫ ರೂ.
 
- ಸಾರಿಗೆ ಇಲಾಖೆ ನಿರ್ಧರಿಸಿದ ದರ: ೦-೨ ಕಿ.ಮೀ ೩೫ ರೂ ದರ. ಪ್ರತಿ ಹೆಚ್ಚುವರಿ ೧ ಕಿಮೀಗೆ ೧೭ವರೆ ರೂ.
 
ಎರೆಡೆರೆಡು ಸಭೆಗಳನ್ನ ನಡೆಸಿ ದರವನ್ನು ನಿಗಧಿ ಮಾಡಲಿದ್ದಾರೆ. ಸಾರಿಗೆ ಇಲಾಖೆಯ ಸೆಕ್ರೆಟರಿ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಇಲ್ಲಿ ನಿರ್ಧಾರವಾಗುವ ದರವನ್ನೇ ಫೈನಲ್ ಮಾಡಿ ಎಂದು ಕೆಲವು ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ. ಸದ್ಯ ಪ್ರತಿ ೨ ಕೀಮೀಗೆ ಓಲಾ ಊಬರ್‌ನಿಂದ ೮೦-೧೦೦ ದರ ತೆಗೆದುಕೊಳ್ತಿದ್ದಾರೆ. ೭ನೇ ತಾರೀಖಿಗೆ ಕೋರ್ಟ್ ವಿಚಾರಣೆ ಇರೋದ್ರಿಂದ, ಸಾರಿಗೆ ಇಲಾಖೆಯ ದರದ ವರದಿಯನ್ನ ಕೋರ್ಟ್‌ಗೆ ನೀಡುತ್ತೆ. ಈ ವೇಳೆ ಇದೇ ದರವನ್ನ ಮುಂದುವರೆಸಿ ಅಂದ್ರೆ ಓಲಾ, ಊಬರ್ ಕಂಪನಿಗಳು ನ್ಯಾಯಲಾಯದ ಆದೇಶಕ್ಕೆ ತಲೆಬಾಗಬೇಕಾಗುತ್ತದೆ.
 
 ೨೦೨೧ಕ್ಕೆನೆ ಓಲಾ, ಊಬರ್ ಕಂಪನಿಗಳಿಗೆ ಕೊಟ್ಟಿದ್ದ ಲೈಸನ್ಸ್ ಮುಗಿದಿದೆ. ಹಾಗಿದ್ರೂ ನಗರದಲ್ಲಿ ಅನಧಿಕೃತವಾಗಿ ಸೇವೆಯನ್ನ ಆರಂಭಿಸಿವೆ.ಕ್ರಮಕ್ಕೆ ಮುಂದಾಗಿದ್ದ ಸಾರಿಗೆ ಇಲಾಖೆಯ ಮೇಲೆಯೆ ತಡೆಯಾಜ್ಙೆ ತಂದಿದ್ದ ಓಲಾ, ಊಬರ್ ಕಂಪನಿಗೆ ಕೋರ್ಟ್ ಏನು ಆದೇಶ ಕೊಡುತ್ತೆ  ಅನ್ನೋದನ್ನ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ