ಒಮೈಕ್ರಾನ್‌ ಹೊಸ ತಳಿ ಹೈದರಾಬಾದ್‌ನಲ್ಲಿ ಪತ್ತೆ

ಶುಕ್ರವಾರ, 20 ಮೇ 2022 (20:54 IST)
ಭಾರತದಲ್ಲಿ ಒಮೈಕ್ರಾನ್‌ನ ಉಪ ತಳಿ BA.4ರ ಮೊದಲ ಪ್ರಕರಣ ತೆಲಂಗಾಣದ ಹೈದರಾಬಾದ್‌ನಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ..ಈ ಉಪ ವ್ಯತ್ಯಯವು  ಒಮೈಕ್ರಾನ್‌ನ ಮತ್ತೊಂದು ಉಪರೂಪವಾದ BA.5 ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಮುಖ ಅಲೆಯನ್ನು ಉಂಟುಮಾಡುತ್ತಿದೆ. ಈಗ US ಮತ್ತು UK ಸೇರಿದಂತೆ ಹಲವಾರು ಇತರ ದೇಶಗಳಲ್ಲಿ ವರದಿಯಾಗಿದೆ.
ಓಮಿಕ್ರಾನ್ ಹೊಸ ತಳಿಯ ಪತ್ತೆಯ ಕುರಿತು INSACOG ಇನ್ನೂ ಯಾವುದೇ ರೀತಿಯ ಅಧಿಕೃತ ಘೋಷಣೆ ಮಾಡಿಲ್ಲ..ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಆಗಮಿಸಿದ ಆಫ್ರಿಕನ್ ಪ್ರಜೆಯಲ್ಲಿ ಮಾದರಿ ಪತ್ತೆಯಾಗಿದೆ ಎಂದು ಹೇಳಲಾಗ್ತಿದೆ.. ವ್ಯಕ್ತಿಯಿಂದ ಮಾದರಿಯ ಪರೀಕ್ಷೆಯ ವೇಳೆ ಒಮೈಕ್ರಾನ್‌ನ BA.4 ಉಪ ತಳಿಯು ಇರುವುದು ಕಂಡುಬಂದಿದೆ..ಕೂಡಲೇ ಅಗತ್ಯ ಕ್ರಮ ತೆಗೆದುಕೊಂಡು ಹೋಂ ಐಸೋಲೇಷನ್​​ನಲ್ಲಿ ಇರಿಸಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ