ಒಮಿಕ್ರಾನ್ ಕಂಟಕ: ಚುನಾವಣೆ ಮುಂದೂಡುವಂತೆ ಹೈ ಕೋರ್ಟ್ ಸಲಹೆ

ಶುಕ್ರವಾರ, 24 ಡಿಸೆಂಬರ್ 2021 (19:00 IST)
ದೇಶದೆಲ್ಲೆಡೆ ಒಮಿಕ್ರಾನ್ ಭೀತಿ ಶುರುವಾಗಿದ್ದು, ಸಾರ್ವಜನಿಕ ಸಭೆಗಳನ್ನು ನಿಲ್ಲಿಸಲಾಗಿದೆ, ಚುನಾವಣೆಗಳನ್ನು ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಅಲಹಾಬಾದ್ ಹೈ ಕೋರ್ಟ್ ಸಲಹೆ ನೀಡಿದೆ.
ಸಾರ್ವಜನಿಕ ಸಭೆಗಳು, ಚುನಾವಣೆ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಜನ ಒಂದೆಡೆ ಸೇರುತ್ತಾರೆ, ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಈಗಿನಿಂದಲೇ ಸೋಂಕು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲು ಒಳ್ಳೆಯದು ಎಂಬ ಸಲಹೆಯನ್ನು ನೀಡಲಾಗಿದೆ.
ಚುನಾವಣೆಗೆ ಸಜ್ಜುಗೊಂಡಿರುವ ರಾಜ್ಯಗಳಲ್ಲಿ ಈ ಕ್ರಮ ಶೀಘ್ರವಾಗಿ ನಡೆಯುವುದು ಸೂಕ್ತ ಎಂದು ತಿಳಿಸಲಾಗಿದೆ.
ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ. ಮೂರನೇ ಅಲೆ ಸಾಧ್ಯತೆ ಕಣ್ಮುಂದೆಯೇ ಇದೆ. ಬೇರೆ ದೇಶಗಳು ಅನಿವಾರ್ಯವಾಗಿ ಲಾಕ್ಡೌನ್ ಮೊರೆ ಹೋಗಿವೆ. ಅಂಥ ಸ್ಥಿತಿ ಇಲ್ಲಿ ಮತ್ತೆ ಬರುವುದು ಬೇಡ.
ಎರಡನೇ ಅಲೆಯಲ್ಲಿ ಜನರಿಗೆ ಸೋಂಕು ತಗುಲಿದೆ ಹಾಗೂ ಅಧಿಕೃತವಾಗಿ ತಿಳಿಸಿದ್ದಾರೆ. ಈ ರೀತಿ ಸಾರ್ವಜನಿಕರಲ್ಲಿ ಜನ ಸೇರುವುದರಿಂದ ಪರಿಸ್ಥಿತಿ ಹದಗೆಡುವ ಸಾಧ್ಯತೆ ಹೆಚ್ಚಿದ್ದು, ಇವೆಲ್ಲವನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ