ಪೂಜೆಗೆ ಹೊರಟಿದ್ದ ಬಾಲಕಿ ಮೇಲೆ ಅತ್ಯಾಚಾರ

ಭಾನುವಾರ, 2 ಆಗಸ್ಟ್ 2020 (23:18 IST)
ಆ ಬಾಲಕಿ ಪೂಜೆ ಮಾಡೋದಕ್ಕೆ ಅಂತ ತಮ್ಮ ಹೊಲಕ್ಕೆ ಹೊರಟಿದ್ದಳು ಆದರೆ ಹೊಲದಲ್ಲಿ ಆಕೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ.

ಧಾರವಾಡ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಬಸೀರ್ ಗಡದಾರೆ ಎಂಬ ಆರೋಪಿಯು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಅತ್ಯಾಚಾರದಿಂದಾಗಿ ಆಘಾತಕ್ಕೆ ಒಳಗಾದ ಬಾಲಕಿ ಕ್ರಿಮಿನಾಶಕ ಸೇವಿಸಿ ನಡೆದ ಘಟನೆಯನ್ನು ಮನೆ ಮಂದಿಗೆ ಹೇಳಿದ್ದಾಳೆ.
ಆಸ್ಪತ್ರೆಗೆ ಬಾಲಕಿಯನ್ನು ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೇ ಬಾಲಕಿ ಸಾವನ್ನಪ್ಪಿದ್ದಾಳೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ