ಸೋತು ಸುಣ್ಣವಾದ ಕಾಂಗ್ರೆಸ್ ನಿಂದ ದಿನಕ್ಕೊಂದು ಗಿಮಿಕ್: ಆರ್.ಅಶೋಕ್
ಶುಕ್ರವಾರ, 24 ಸೆಪ್ಟಂಬರ್ 2021 (11:49 IST)
ಬೆಂಗಳೂರು : ಕಾಂಗ್ರೆಸ್ ನವರು ಸೋತು ಸುಣ್ಣವಾದ ಮೇಲೆ ದಿನಕ್ಕೊಂದು ಗಿಮಿಕ್ ಮಾಡುತ್ತಿದ್ದಾರೆ ಎಂದು ಆರ್.ಅಶೋಕ್ ಅವರು ಕಾಂಗ್ರೆಸ್ ಪ್ರತಿಭಟನೆಗೆ ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವತ್ತಾದರು ಪೆಟ್ರೋಲ್ ಡಿಸೆಲ್ ಬೆಲೆ ಕಮ್ಮಿಯಾಗಿದೆಯೇ? ಕಾಂಗ್ರೆಸ್ ನವರಿದ್ದಾಗ ಬೆಲೆ ಏರಿಕೆಯಾದರೆ ಆರ್ಥಿಕ ಸುಧಾರಣೆಗಾಗಿ ಎನ್ನುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆಯಾದರೆ ಅದು ಅಕ್ರಮ ಅನೈತಿಕ ಎನ್ನುತ್ತಾರೆ ಎಂದರು.
ಅವರ ಪಾರ್ಟಿಯನ್ನು ಯಾಕೆ ಬೆಳೆಸಲು ಆಗಿಲ್ಲವೆಂದು ಆತ್ಮವಿಮರ್ಶೆ ಮಾಡುತ್ತಿದ್ದರು. ಮೂಲೆ ಗುಂಪು ಆಗಿರುವ ಕಾಂಗ್ರೆಸ್ ಟಾಂಗಾ ಓಡಿಸುವುದು, ಸೈಕಲ್ ಓಡಿಸಲು ಮಾತ್ರ ಸೀಮಿತವಾಗಿದೆ ಎಂದರು.