ಬೆಂಗಳೂರು: ಕರ್ನಾಕಟದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಾಳೆ ನಡೆಯಲಿದ್ದು, ಇದಕ್ಕಾಗಿ ತಯಾರಿ ಆರಂಭವಾಗಿದೆ. ಪೋಲಿಂಗ್ ಬೂತ್ ಗೆ ಅಧಿಕಾರಿಗಳು ಇಂದೇ ತೆರಳಲಿದ್ದಾರೆ.
ಇಂದಿನಿಂದ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಇಂದು ಕೇವಲ 5 ಜನರು ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅನುಮತಿ ನೀಡಲಾಗಿದೆ. ಈ ಒಂದು ದಿನ ಜನರು ಯಾರಿಗೆ ಮತ ಹಾಕಬೇಕೆಂದು ವಿವೇಚನೆ ನಡೆಸಿ ನಾಳೆ ಮತದಾನ ಮಾಡಬೇಕಿದೆ.
ನಾಳೆ ಒಟ್ಟು 14 ಕ್ಷೇತ್ರಗಳಿಗೆ ಮತದಾನ ಮಾಡಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಭಾಗದ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿನ್ನೆಯಿಂದಲೇ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ನಿಷೇಧಾಜ್ಷೆ ಜಾರಿ ಮಾಡಲಾಗಿದ್ದು, ಮದ್ಯಮಾರಾಟ ನಿಷೇಧಿಸಲಾಗಿದೆ.
ಮತದಾನ ಹಿನ್ನಲೆಯಲ್ಲಿ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಕೆಎಸ್ ಆರ್ ಟಿಸಿ ವಿಶೇಷ ಬಸ್ ಗಳನ್ನು ಹಾಕಿದೆ. ಇದರಿಂದಾಗಿ ಜನರಿಗೆ ಮತದಾನ ಮಾಡಲು ತೆರಳಲು ಅನುಕೂಲವಾಗಲಿದೆ. ಯಾವುದೇ ನೆಪ ಹೇಳದೇ ನಾಳೆ ತಪ್ಪದೇ ನಿಮ್ಮ ಅಮೂಲ್ಯ ಮತದಾನ ಮಾಡಿ.