ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕಂಡು ಹೋಗುವ ಮೊದಲು ಈ ಸೂಚನೆ ನೋಡಿ

Krishnaveni K

ಬುಧವಾರ, 24 ಏಪ್ರಿಲ್ 2024 (13:02 IST)
ಬೆಂಗಳೂರು: ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಬಹುದೇ ಎಂದು ಕೆಲವರಲ್ಲಿ ಅನುಮಾಗಳಿರುತ್ತವೆ. ಅವರಿಗೆ ಕರ್ನಾಟಕ ಚುನಾವಣಾ ಆಯೋಗ ಕೆಲವು ಸೂಚನೆಗಳನ್ನು ನೀಡಿದೆ.

ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಮತಗಟ್ಟೆಗಳಲ್ಲಿ ಸಿದ್ಧತೆ ನಡೆಯುತ್ತಿದೆ. ಪೊಲೀಸರೂ ಇಂದಿನಿಂದ ಎರಡು ದಿನಗಳ ಕಾಲ ಸರ್ಪಗಾವಲು ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಸೆಕ್ಷನ್ 144 ಜಾರಿಯಾಗಿದೆ.

ಮತಗಟ್ಟೆಗೆ ಹೋಗುವಾಗ ವೋಟರ್ ಐಡಿ ಅಥವಾ ಸರ್ಕಾರದಿಂದ ದೃಢೀಕರಣವಾದ ಯಾವುದೇ ಐಡಿ ಪ್ರೂಫ್ ಗಳನ್ನು ತೆಗೆದುಕೊಂಡು ಹೋಗಬೇಕು. ಇತ್ತೀಚೆಗಿನ ದಿನಗಳಲ್ಲಿ ಎಲ್ಲಿಗೆ ಹೋಗುವಾಗಲೂ ನಮ್ಮ ಬಳಿ ಮೊಬೈಲ್ ಎಂಬ ಸಾಧನವಿಲ್ಲದೇ ಮನೆಯಿಂದ ಹೊರಗೆ ಕಾಲಿಡುವುದೇ ಇಲ್ಲ.

ಹೀಗಿರುವಾಗ ಮತಗಟ್ಟೆಗೆ ಮೊಬೈಲ್ ತೆಗೆದುಕೊಂಡು ಹೋಗಬಹುದೇ ಎಂಬ ಅನುಮಾನ ಅನೇಕರಿಗಿದೆ. ಚುನಾವಣಾ ಆಯೋಗದ ಆದೇಶದಂತೆ ಪೋಲಿಂಗ್ ಬೂತ್ ನ ಒಳಗೆ ಮೊಬೈಲ್ ತೆಗೆದುಕೊಂಡು ಹೋಗುವುದು ನಿಷಿದ್ಧವಾಗಿದೆ. ಒಂದು ವೇಳೆ ಮತದಾನ ಮಾಡಲು ಹೋಗುವಾಗ ಅನಿವಾರ್ಯವಾಗಿ ಮೊಬೈಲ್ ತೆಗೆದುಕೊಂಡು ಹೋದರೂ ಅದನ್ನು ಹೊರಗಡೆಯೇ ಸುರಕ್ಷಿತವಾಗಿ ಇಡಲು ವ್ಯವಸ್ಥೆ ಮಾಡಲಾಗಿದೆ. ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿ ಅಧಿಕಾರಿಗಳ ಬಳಿ ಇರುವ ಟ್ರೇನಲ್ಲಿ ಇಟ್ಟು ಮತದಾನ ಮಾಡಲು ತೆರಳಬಹುದು. ವಾಪಸ್ ಮತದಾನ ಮಾಡಿ ಹೊರಬಂದ ಮೇಲೆ ಮೊಬೈಲ್ ಫೋನ್ ಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ. ಬೂತ್ ಒಳಗೆ ಮೊಬೈಲ್ ಬಳಕೆ ಮಾಡಬಾರದು ಎಂಬ ಉದ್ದೇಶಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ