ಬೆಲೆ ಏರಿಕೆಯಿಂದ ಬೆಂದಿದ್ದ ಜನರಿಗೆ ಕಣ್ಣಿರು ತರುಸಲಿದೆ ಈರುಳ್ಳಿ

ಮಂಗಳವಾರ, 4 ಜುಲೈ 2023 (21:00 IST)
ಈರುಳ್ಳಿ ಬೆಲೆಯಲ್ಲಿ‌ ಬಾರಿ ಹೆಚ್ಚಳ‌ ಸಾಧ್ಯತೆ ಇದೆ.ಈಗಾಗಲೇ ಈರುಳ್ಳಿ ಬೆಲೆ ಏರು‌ಮುಖವಾಗ್ತಿದೆ.ಈ ಹಿಂದೆ ಹೋಲ್ ಸೇಲ್ ಬೆಲೆ  ಪ್ರತಿ ಕೇಜಿಗೆ 1೦ರೂಪಾಯಿ‌ ಇತ್ತು.ಇದೀಗ ಹೋಲ್ ಸೇಲ್ ದರ 25ರೂಪಾಯಿ‌ ತಲುಪಿದೆ.ಕಳೆದವಾರ 15ರಿಂದ 2೦ರೂಪಾಯಿಗೆ ಈರುಳ್ಳಿ‌ ಜನರ ಕೈ ತಲುಪುತ್ತಿತ್ತು .ಇದೀಗ  ಈರುಳ್ಳಿ ಬೆಲೆ ದೀಢಿರ್ ಹೆಚ್ಚಳವಾಗಿದೆ.ಪ್ರತಿ ಕೆಜಿಗೆ ಈರಳ್ಳಿ 30ರಿಂದ 40ರೂಪಾಯಿ ತಲುಪಿದೆ.ಈರುಳ್ಳಿ ಬೆಲ ಮುಂದಿನ ದಿನಗಳಲ್ಲಿ ನೂರರ ಗಡಿ ದಾಟುವ ಸಾಧ್ಯತೆ ಇದೆ.ಈರುಳ್ಳಿ‌ ಬೆಲೆ ಹೆಚ್ಚಳ ಗ್ರಾಹಕರನ್ನ‌ ಕಂಗೆಡಿಸೋದು ಗ್ಯಾರಂಟಿಯಾಗಿದೆ.
 
ಇನ್ನೂ ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣ  ಹೊರ ರಾಜ್ಯದಿಂದ‌ ರಾಜ್ಯಕ್ಕೆ ಪೂರೈಕೆ‌ಯಾಗ್ತಿದ್ದ ಈರುಳ್ಳಿಯಲ್ಲಿ ವ್ಯತ್ಯಯ‌ವಾಗಿದೆ.ಈ ಸೀಸನ್‌‌ನಲ್ಲಿ ಹೊರ ರಾಜ್ಯದ ಈರುಳ್ಳಿಯನ್ನೇ ರಾಜ್ಯ ಅವಲಂಬಿಸಿದೆ.ಮಹಾರಾಷ್ಟ್ರದ ಈರುಳ್ಳಿಯನ್ನ ರಾಜ್ಯ ನಂಬಿಕೊಂಡಿದೆ.ಅಗತ್ಯವಿದ್ದಷ್ಟು ಈರುಳ್ಳಿ ರಾಜ್ಯಕ್ಕೆ ಬರ್ತಿಲ್ಲ.ಕರ್ನಾಟಕದ ಈರುಳ್ಳಿಯ ಇಳುವರಿ ಬರೋದಕ್ಕೆ ಇನ್ನು ಎರಡು ತಿಂಗಳುಬೇಕು.ಈಗಷ್ಟೇ ಈರುಳ್ಳಿ ಬಿತ್ತನೆ ಕಾರ್ಯನಡೆದಿದೆ.ಮುಂಗಾರು ಕೂಡ ಸರಿಯಾಗಿ ಆಗ್ತಿಲ್ಲ.ಮಳೆ ಅಭಾವದಿಂದ ಈರುಳ್ಳಿ ಇಳುವರಿ ಕುಂಟಿತವಾಗೋ ಸಾಧ್ಯತೆಯೇ ಹೆಚ್ಚಿದೆ ಎಂದು ವ್ಯಾಪಾರಿ ರಂಗಸ್ವಾಮಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ