ಪ್ರಿಯಾಂಕ ಚೋಪ್ರ ಅಭಿನಯದ ಬಾಲಿವುಡ್ ನ ಈ ಸಿನಿಮಾ ನಿಕ್ ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆಯಂತೆ

ಭಾನುವಾರ, 1 ಜುಲೈ 2018 (13:47 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ಹಾಲಿವುಡ್ ಸಿಂಗರ್ ನಿಕ್ ಜಾನ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ರೂಮರ್ಸ್ ಈಗಾಗಲೇ ಸಾಕಷ್ಟು ಬಾರಿ ಕೇಳಿ ಬಂದಿದೆ. ಅಲ್ಲದೇ ಸಭೆ, ಸಮಾರಂಭಗಳಲ್ಲಿಯೂ ಇವರಿಬ್ಬರು ಜೊತೆಯಾಗಿ ಕೈ ಕೈ ಹಿಡಿದುಕೊಂಡು ತಿರುಗಾಡುತ್ತಿರುವುದು ನೋಡಿದರೆ ಅವರ ಸಂಬಂಧ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗುವುದು.


ಆದರೆ ಈಗ ಇವರಿಬ್ಬರ ಕುರಿತಾದ ಹೊಸದೊಂದು ವಿಚಾರವೆನೆಂದರೆ ನಿಕ್ ಗೆ ಬಾಲಿವುಡ್ ಬಗ್ಗೆ ಅಷ್ಟಾಗಿ ತಿಳಿದಿಲ್ಲವಾದರೂ ಕೂಡ ಪ್ರೀತಿಯ ಸಲುವಾಗಿ ಪ್ರಿಯಾಂಕಾಳ ಬಾಲಿವುಡ್ ಚಲನಚಿತ್ರಗಳನ್ನು ವೀಕ್ಷಿಸಿದ್ದಾರಂತೆ.


ಅದರಲ್ಲೂ ಬಾಜಿರಾವ್ ಮಸ್ತಾನಿ ಚಿತ್ರ ಸಿಕ್ಕಾಪಟ್ಟೆ ಇಷ್ಟವಾಗಿದೆಯಂತೆ. ಈ ಚಿತ್ರದಲ್ಲಿ ಕಾಶಿಬಾಯ್ ಪಾತ್ರದಲ್ಲಿ ಪಿಗ್ಗಿಯ ಪ್ರಾಮಾಣಿಕ ಅಭಿನಯಕ್ಕಾಗಿ ವಿಮರ್ಶಾತ್ಮಕ ವಿಮರ್ಶೆಗಳನ್ನು ಸ್ವೀಕರಿಸಿದ್ದರೂ, ನಿಕ್ ಗೆ ಮಾತ್ರ ಪ್ರಿಯಾಂಕಾ ಅಭಿನಯಿಸಿದ ಚಿತ್ರಗಳಲ್ಲಿ ಈ ಚಿತ್ರ ತುಂಬಾ ಇಷ್ಟವಾಯಿತಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ