ಆಪರೇಷನ್ ಕಮಲ ಭೀತಿ: ಹಿರಿಯ ಕಾಂಗ್ರೆಸ್ಸಿಗ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕರೂ ಆಪರೇಷನ್ ಕಮಲಕ್ಕೆ ಬಲಿಯಾಗಬಾರದು. ನಿಜವಾಗಲೂ ಇರುವ ಕಾಂಗ್ರೆಸ್ ಶಾಸಕರು ಬಿಜೆಪಿಯವರ ಆಮಿಷಕ್ಕೆ ಸೊಪ್ಪು ಹಾಕುವುದಿಲ್ಲ ಎಂದಿದ್ದು, ಆಪರೇಷನ್ ಕಮಲಕ್ಕೆ ಯಾರೂ ಸಹ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗುತ್ತೇನೆ ಎಂದು ಮತ್ತೆ ಮತ್ತೆ ಕನಸು ಕಾಣುತ್ತಾ ಭ್ರಮೆಯಲ್ಲಿದ್ದಾರೆ. ಅದಕ್ಕಾಗಿ ಆಪರೇಷನ್ ಕಮಲಕ್ಕೆ ಚಾಲನೆ ನೀಡಿದ್ದಾರೆ ಎಂದು ದೂರಿದರು. ಬಿಜೆಪಿಯವರು ನಡೆಸುತ್ತಿರುವ ಈ ಕ್ರಮ ಪ್ಲಾಪ್ ಶೋ ಆಗಿದೆ ಎಂದು ಟೀಕೆ ಮಾಡಿದರು.