ರೇಸ್ ಕೋರ್ಸ್ ಮೇಲೆ ದಾಳಿ ಸಂಬಂಧ ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಲಾಗುತ್ತೆ-ದಯಾನಂದ್

geetha

ಶನಿವಾರ, 13 ಜನವರಿ 2024 (16:00 IST)
ಬೆಂಗಳೂರು-ಸಿಸಿಬಿ ಪೊಲೀಸರಿಂದ ರೇಸ್ ಕೋರ್ಸ್ ಮೇಲೆ ದಾಳಿ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಪ್ರತಿಕ್ರಿಯಿಸಿದ್ದಾರೆ.ಸಿಸಿಬಿ ತಂಡದ ವಿಶೇಷ ವಿಚಾರಣೆ ದಳದವ್ರು ದಾಳಿ ಮಾಡಿದ್ರು.ಅಧಿಕೃತವಾಗಿ ಬೆಟ್ಟಿಂಗ್ ಆಡ್ತಾರೆ ಆದ್ರ ಜೊತೆಗೆ ಅನಧಿಕೃತವಾಗಿ ಕೂಡ ಬೆಟ್ಟಿಂಗ್ ನಡೆಸಲಾಗ್ತಿತ್ತು.ಯಾವುದೇ ಡಾಕ್ಯುಮೆಂಟ್, ರಷೀದಿ ಇಟ್ಟುಕೊಳ್ಳದೇ ಹಣದ ವ್ಯವಹಾರ ನಡೆಸಲಾಗಿತ್ತು.ಈ ಹಿನ್ನಲೆ ದಾಳಿ‌ ಮಾಡಿ  3ಕೋಟಿ 45ನಗದು ಹಣ ವಶಪಡೆಸಿಕೊಳ್ಳಲಾಗಿದೆ.66ಜನರನ್ನ ಠಾಣೆಗೆ ಕರೆಸಿ ಮಾಹಿತಿ ಪಡೆದು ನೊಟೀಸ್ ನೀಡಲಾಗಿದೆ.41ಅಡಿ ನೊಟೀಸ್ ನೀಡಲಾಗಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ.ಇದ್ರ ಲಾಭ ಯಾರು ಪಡೆದುಕೊಳ್ತಿದ್ದಾರೆ..? ಇದ್ರ ಹಿಂದೆ ಯಾರಿದಾರೆ ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ.ಈ ರೀತಿ ಅಕ್ರಮ‌ ಬೆಟ್ಟಿಂಗ್ ನಿಂದ ಜಿಎಸ್ ಟಿ ವಂಚನೆ ಆಗಿದೆ.28% ಜಿಎಸ್ ಟಿ ಕಟ್ಟಬೇಕು.. ಆದ್ರೆ ಜಿಎಸ್ ಟಿ ತೆರಿಗೆ ವಂಚನೆ ಮಾಡಲಾಗಿದೆ.ಅನಧಿಕೃತ ವ್ಯಕ್ತಿಗಳು ಕೌಂಟರ್ ನಡೆಸ್ತಿದ್ದ ಮಾಹಿತಿ ಸಿಕ್ಕಿದೆ.ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಲಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ