Operation Sindoor: ಮಾಜಿ ಸೇನಾ ಮುಖ್ಯಸ್ಥರ ಈ ಟ್ವೀಟ್ ನೋಡಿದ್ರೆ ಮತ್ತೆ ಪಾಕಿಗಳ ಬುಡ ಅಲ್ಲಾಡೋದು ಗ್ಯಾರಂಟಿ

Sampriya

ಬುಧವಾರ, 7 ಮೇ 2025 (17:05 IST)
Photo Credit X
ಪಹಲ್ಗಾಮ್‌ನಲ್ಲಿ ಮುಗ್ದ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದಕ್ಕೆ ಭಾರತ ಆಪರೇಷನ್ ಸಿಂಧೂರ್ ಮೂಲಕ ಪಾಕ್‌ಗೆ ಖಡಕ್ ಉತ್ತರವನ್ನು ನೀಡಿದೆ. ಭಾರತದ ಪ್ರತೀಕಾರಕ್ಕೆ ಇಡೀ ಪಾಕ್‌ ಬೆಚ್ಚಿಬಿದ್ದಿದೆ.

ಇದೀಗ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಮನೋಜ್ ನರವಾಣೆ ಅವರು ಆಪರೇಷನ್ ಸಿಂಧೂರ್‌ ಬಳಿಕ ಮಾಡಿದ ಪೋಸ್ಟ್‌ ಮತ್ತೇ ಪಾಕಿಗಳ ನಿದ್ದೆಗೆಡಿಸುವಂತಿದೆ.

ಪೋಸ್ಟ್‌ನಲ್ಲಿ ಆಪರೇಷನ್ ಸಿಂದೂರ್ ಭಾರತದ ಒಂದು ನೋಟ ಅಷ್ಟೇ ಇನ್ನೂ ಬಾಕಿಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಸೇನೆಯ 28 ನೇ ಸೇನಾ ಮುಖ್ಯಸ್ಥರಾಗಿದ್ದ ಮನೋಜ್ ನರವಾಣೆ ಅವರು ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಬರೆದಿದ್ದಾರೆ. ಭಯೋತ್ಪಾದಕ ಗುರಿಗಳನ್ನು ಗುರಿಯಾಗಿಸಲು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ ಅನೇಕ ಸ್ಥಳಗಳಲ್ಲಿ ಭಾರತೀಯ ರಕ್ಷಣಾ ದಾಳಿ ನಡೆಸಿದ ಗಂಟೆಗಳ ನಂತರ ಅವರು ಈ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು 26 ಜನರನ್ನು ಬಲಿತೆಗೆದುಕೊಂಡ ಎರಡು ವಾರಗಳ ನಂತರ ಭಾರತ ಪ್ರತೀಕಾರವನ್ನು ತೀರಿಸಿಕೊಂಡಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ