Operation Sindoor: ನಮ್ಮ ಸೇನೆ ನಮ್ಮ ಹೆಮ್ಮೆ, ಕೇಂದ್ರಕ್ಕೆ ಪೂರ್ಣ ಬೆಂಬಲ ಎಂದ ಸಚಿವ ಜಮೀರ್‌ ಅಹಮ್ಮದ್‌

Sampriya

ಬುಧವಾರ, 7 ಮೇ 2025 (14:46 IST)
Photo Courtesy X
ಬೆಂಗಳೂರು: ಭಾರತೀಯ ಸೇನೆಯು ಪಾಕ್‌ನಲ್ಲಿ ನಡೆಸಿರುವ ಉಗ್ರದ ಅಡಗುತಾಣಗಳ ಮೇಲೆ ಆಪರೇಷನ್ ಸಿಂಧೂರ್ ನಡೆಸಿ ತನ್ನ ಶಕ್ತಿ ಹಾಗೂ ಪರಾಕ್ರಮ ತೋರಿಸಿದೆ ಎಂದು  ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯ. ಉಗ್ರರಿಗೆ ಆಶ್ರಯ ನೀಡುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗಿದೆ. ನಮ್ಮ ತಂಟೆಗೆ ಬಂದರೆ ಉಗ್ರರಿಗೆ ಹಾಗೂ ಪಾಕಿಸ್ತಾನಕ್ಕೆ ಉಳಿಗಾಲ ಇಲ್ಲ ಎಂಬ ಸಂದೇಶ ರವಾನೆಯಾಗಿದೆ. ನಮ್ಮ ಸೇನೆ ನಮ್ಮ ಹೆಮ್ಮೆ ಎಂದು ಹೊಸಪೇಟೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಭಯೋತ್ಪಾದಕ ಕೃತ್ಯ ಎಸಗುವ ಉಗ್ರಗಾಮಿ ಸಂಘಟನೆಗಳ ಹುಟ್ಟಡಗಿಸುವ ಹೋರಾಟದಲ್ಲಿ ನಾವೆಲ್ಲರೂ ಕೇಂದ್ರ ಸರ್ಕಾರದ ಜತೆ ಇದ್ದೇವೆ ಎಂದು ಅವರು ತಿಳಿಸಿದ್ದಾರೆ.

ಏ.22ರಂದು ಪೆಹಲ್ಗಾಮ್ ದಾಳಿಯಲ್ಲಿ ಅಮಾಯಕರ ಜೀವ ಪಡೆದ ಪಾಕಿಸ್ತಾನ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಕಳೆದ ರಾತ್ರಿ ಆಪರೇಷನ್‌ ಸಿಂಧೂರ್ ಹೆಸರಿನಲ್ಲಿ ಏರ್‌ ಸ್ಟ್ರೈಕ್‌ ನಡೆಸಿದ್ದು, 9 ಉಗ್ರದ ತಾಣಗಳನ್ನು ಉಡೀಸ್‌ ಮಾಡಿದ್ದು, ಹಲವು ಉಗ್ರರು ಹತರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ