ಪ್ರಸಕ್ತ ವರ್ಷದಿಂದ ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಪಾಠದಡಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಭಗವದ್ಗೀತೆ ಭೋದಿಸಲು ಮುಂದಾಗಿದೆ. ಕಳೆದ ಒಂದು ತಿಂಗಳ ಹಿಂದೆಯೇ ಶಾಲೆಯಲ್ಲಿ ಭಗವದ್ಗೀತೆ ಭೋದನೆಗೆ ಸಕಲ ರೀತಿಯಿಂದ ತಯಾರಿ ನಡೆದಿಸಿರುವ ಶಿಕ್ಷಣ ಇಲಾಖೆ, ತಜ್ಞರ ಸಮಿತಿ ರಚಿಸಿ ಭಗವದ್ಗೀತೆ ಸೇರಿದಂತೆ ವಿವಿಧ ವಿಷಯಗೊಳಗೊಂಡ ನೈತಿಕ ಪಠ್ಯ ಭೋದನೆಗೆ ತಯಾರಿ ನಡೆಸಿದ್ದು, ಡಿಸೆಂಬರ್ ನಲ್ಲಿ ಶಾಲೆಗಳಲ್ಲಿ ನೈತಿಕ ಪಠ್ಯದಡಿ ಗೀತೆ ಭೋದನೆಗೂ ಮುಂದಾಗಿದೆ.ಆದ್ರೆ ಶಿಕ್ಷಣ ಇಲಾಖೆಯ ಈ ನಡೆಗೆ ಈಗ ವಿರೋಧ ಕೇಳಿ ಬರುತ್ತಿದೆ.
ಭಗವದ್ಗೀತೆ ಭೋದನೆ ವಿಚಾರಕ್ಕೆ ಕಳೆದ ಒಂದು ತಿಂಗಳು ಹಿಂದೆಯೇ ಭಗವದ್ಗೀತೆ ಜೊತೆ ಕುರಾನ್ ಹಾಗೂ ಬೈಬಲ್ ಭೋದಿಸುವಂತೆ ಮುಸ್ಲಿಂ ಮೌಲ್ವಿ ಹಾಗೂ ಕ್ರಿಶ್ಚಿಯನ್ ಮುಖಂಡರು ಶಿಕ್ಷಣ ಸಚಿವರಿಗೆ ಒತ್ತಾಯ ಮಾಡಿದರು. ಶಾಲೆಗಳಲ್ಲಿ ಭಗವದ್ಗೀತೆ ಅಷ್ಟೇ ಯಾಕೆ ಭಗವದ್ಗೀತೆಯ ಜೊತೆಗೆ ಮಕ್ಕಳಿಗೆ ಕುರಾನ್ ಹಾಗೂ ಬೈಬಲ್ ಹೇಳಿಕೊಡಬೇಕು ಅಂತಾ ಮುಸ್ಲಿಂ ಮುಖಂಡ ಹಾಗೂ ಮದರಸಾ ಮೌಲಾನಗಳು ಒತ್ತಾಯ ಮಾಡಿದರು.ಆದ್ರೆ ಇದಕ್ಕೆ ಶಿಕ್ಷಣ ಸಚಿವರು ಕುರಾನ್ ಹಾಗೂ ಬೈಬಲ್ ಇವೆರಡು ಧರ್ಮ ಗ್ರಂಥಗಳು ಅಂತಾ ತಿರಗೇಟು ನೀಡಿದರು.ಆದ್ರೆ ಈಗ ಶಿಕ್ಷಣ ಸಚಿವರ ನಡೆ ಗೆ ಕೆಲವು ಸಾಹಿತಿಗಳು ತಿರಗೇಟು ನೀಡಿದ್ದು ,ಭಗವದ್ಗೀತೆ ಯಿಂದ ಮಕ್ಕಳಿಗೆ ಯಾವ ನೈತಿಕ ಶಿಕ್ಷಣ ಸಿಗುತ್ತೆ ಅಂತ ತಮ್ಮ ವಿರೋಧ ಹೊರ ಹಾಕಿದ್ದಾರೆ .