ಮತ್ತಷ್ಟು ಹಿಗ್ಗಲಿದೆ ನಮ್ಮ ಮೆಟ್ರೋ
ಬೆಂಗಳೂರಿನ K.R.ಪುರಂ ಟು ವೈಟ್ ಫೀಲ್ಡ್ ಮಾರ್ಗದಲ್ಲಿ ಮೆಟ್ರೋ ಓಡಾಟ ಶೀಘ್ರದಲ್ಲೇ ಆರಂಭವಾಗಲಿದೆ. ಈ ಮೂಲಕ ನಮ್ಮ ಮೆಟ್ರೋ ಮತ್ತಷ್ಟು ಹಿಗ್ಗಲಿದೆ. ಈಗಾಗಲೇ ವೈಟ್ ಫೀಲ್ಡ್ ಟು K.R. ಪುರಂ ನಡುವೆ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಸದ್ಯ ಪ್ರಾಯೋಗಿಕ ಸಂಚಾರದಲ್ಲಿ 90 ಕಿಲೋ ಮೀಟರ್ ವೇಗದಲ್ಲಿ ಟ್ರೈನ್ ಸಂಚರಿಸುತ್ತಿದೆ. ಮುಂದಿನ ತಿಂಗಳಿನಿಂದ ಕಂಪ್ಲೀಟ್ ಹಳಿ ಮೇಲೆ ಮೆಟ್ರೋ ಓಡಲಿದೆ. ಫೆಬ್ರವರಿ 22ರಿಂದ ರೈಲ್ವೆ ಸುರಕ್ಷತಾ ಆಯುಕ್ತರು ಆಗಮಿಸಿ, ಅಂತಿಮ ಪರಿಶೀಲನೆ ನಡಸಲಿದ್ದಾರೆ. ಟ್ರ್ಯಾಕ್, ಸಿಗ್ನಲಿಂಗ್, ವಿದ್ಯುತ್ ಪೂರೈಕೆ ಬೋಗಿಗಳ ಚಲನೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಸೇಫ್ಟಿ ಬಗ್ಗೆ ಸುರಕ್ಷತಾ ಪ್ರಮಾಣಪತ್ರ ನೀಡಿದ ಬಳಿಕ ವಾಣಿಜ್ಯ ಸಂಚಾರ ಆರಂಭವಾಗಲಿದೆ. K.R. ಪುರ ಟು ವೈಟ್ ಫೀಲ್ಡ್ 13.5 ಕಿಲೋ ಮೀಟರ್ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ.