ಅನಧಿಕೃತ ಶಾಲೆಗಳ ಹಾವಳಿ

ಶನಿವಾರ, 18 ಫೆಬ್ರವರಿ 2023 (14:22 IST)
ಇತ್ತೀಚೆಗೆ ಅನಧಿಕೃತ ಶಾಲೆಗಳ ಹಾವಳಿ ರಾಜ್ಯದಲ್ಲಿ ಹೆಚ್ಚಿವೆ. ಸಾರ್ವಜನಿಕ ಶಿಕ್ಷಣ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಶಾಲೆಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಹೆಚ್ಚು ಶಾಲೆಗಳು ಬೆಂಗಳೂರಿನಲ್ಲಿಯೇ ಇವೆ. ಇತ್ತ ಈ ವರದಿಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಕೆಲವು ಅವೈಜ್ಞಾನಿಕ ಮಾನದಂಡಗಳಿಟ್ಟುಕೊಂಡು ಅನಧಿಕೃತ ಶಾಲೆಗಳೆಂದು ಗುರುತಿಸಿರುವುದನ್ನು ಕೈ ಬಿಡಬೇಕು ಎಂದು ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪತ್ತೆಗೆ ಮುಂದಾಗಿದೆ.  ರಾಜ್ಯದಲ್ಲಿರುವ 34 ಶೈಕ್ಷಣಿಕ ಜಿಲ್ಲೆಗಳಲ್ಲಿ1,316 ಅನಧಿಕೃತ ಶಾಲೆಗಳಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯು ಸರಕಾರಕ್ಕೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ