ಬೆಂಗಳೂರು ನಗರದಲ್ಲಿ ಬೆಸ್ಕಾಂನಿಂದ 10 ಲಕ್ಷಕ್ಕೂ ಅಧಿಕ ಡಿಜಿಟಲ್ ಮೀಟರ್ ಅಳವಡಿಕೆ
ಬೆಸ್ಕಾಂನ ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿ ನೆನ್ನೆಯವರೆಗೆ ಒಟ್ಟು 10,74,000 ಸಿಂಗಲ್ ಫೇಸ್ ಡಿಜಿಟಲ್ ಮೀಟರ್ಗಳನ್ನು ಅಳವಡಿಸಲಾಗಿದ್ದು, ಇದುವರೆಗೆ ಶೇ. 70ರಷ್ಟು ಪ್ರಗತಿ ಸಾಧಿಸಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 58,77,000 ಎಲ್.ಟಿ ವಿದ್ಯುತ್ ಮಾಪಕಗಳಿವೆ. ಸಮೀಕ್ಷೆಯ ಪ್ರಕಾರ ಇವುಗಳಲ್ಲಿ 17,23,000 ಇಲೆಕ್ಟ್ರೊ ಮೆಕಾನಿಕಲ್ ಮೀಟರ್ ಗಳಾಗಿದ್ದು, ಇವುಗಳನ್ನು ಡಿ.ಎಲ್.ಎಮ್.ಎಸ್ ಸ್ಟ್ಯಾಟಿಕ್ ಡಿಜಿಟಲ್ ಮಾಪಕಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಬೆಸ್ಕಾಂ ಜುಲೈ 2022 ರಂದು ಚಾಲನೆ ನೀಡಿತ್ತು ಡಿ.ಎಲ್.ಎಮ್.ಎಸ್ ಸ್ಟ್ಯಾಟಿಕ್ ಮೀಟರ್ ಗ್ರಾಹಕ ಸ್ನೇಹಿಯಾಗಿದ್ದು ಸಿಂಗಲ್ ಫೇಸ್ ಅಥವ 3 ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್ ವೊಲ್ಟೇಜ್ ಮತ್ತು ವಿದ್ಯುತ್ ಸಂಪರ್ಕಿತ ಲೋಡ್ ಮಾಹಿತಿ ಪಡೆಯಬಹುದಾಗಿದೆ. ಈ ಡಿಜಿಟಲ್ ಮೀಟರ್ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದ್ದು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲವೆಂದು ಬೆಸ್ಕಾಂ ತಿಳಿಸಿದ್ದಾರೆ.