ಬಿಡಿಎ ಕಡೆಯಿಂದ ಡಾ. ಶಿವರಾಮ ಕಾರಂತ ಬಡಾವಣೆಗೆ ನಿವೇಶನ ಅರ್ಹತಾ ಪ್ರಮಾಣ ಪತ್ರ ಹಂಚಿಕೆ

ಶನಿವಾರ, 3 ಡಿಸೆಂಬರ್ 2022 (17:52 IST)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಡಾ. ಶಿವರಾಮ ಕಾರಂತ ಬಡಾವಣೆಗೆ ಜಮೀನು ನೀಡಿರುವ ರೈತರಿಗೆ 60:40 ಅನುಪಾತದಡಿ ನಿಗದಿಪಡಿಸಿರುವ ಶೇ. 40ರಷ್ಟು ಅಭಿವೃದ್ಧಿಪಡಿಸಿದ ನಿವೇಶನಗಳ ಭೂಪರಿಹಾರವನ್ನು ಆಯ್ಕೆ ಮಾಡಿಕೊಂಡಿರುವ 21 ಫಲಾನುಭವಿಗಳಿಗೆ ಇಂದು ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಯಿತು. ಸರ್ವೋಚ್ಚ ನ್ಯಾಯ್ಯಲಯದ ನಿರ್ದೇನದಂತೆ ಭೂಮಾಲಿಕರಿಗೆ ಐತಿರ್ಪು ರಚಿಸಿ ಸ್ವಾಧಿನ ಪಡಿಸಿಕೊಂಡ ಜಮೀನುಗಳಿಗೆ ಅಭಿವೃದ್ಧಿ ಪಡಿಸಿದ ನೀವೆಶನಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಿದ್ದು ಅದರಂತೆ ಬಡಾವಣೆಗಾಗಿ ಭೂಮಿ ನೀಡಿರುವ 113 ರೈತರಿಗೆ ಈವರೆಗೆ ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗಿದೆ. ಬಡಾವಣೆ ವ್ಯಾಪ್ತಿಯಲ್ಲಿ ಬರುವ ಗುಣಿ ಅಗ್ರಹಾರ ಮತ್ತು ಮೇಡಿ ಅಗ್ರಹಾರ ಗ್ರಾಮದ ಒಟ್ಟು 21 ರೈತರಿಗೆ ಇಂದು Entitlement certificate ಗಳನ್ನು ವಿತರಿಸಲಾಗಿದೆ. ಶೀಘ್ರದಲ್ಲಿ ಇನ್ನೂ 27 ರೈತರಿಗೆ ವಿತರಿಸಲಾಗುವುದು. ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ