ರಾಜ್ಯಸಭೆ: ಬಿಜೆಪಿಯಂತೆ ಪರರಾಜ್ಯದ ರಾಜಕಾರಣಿಗಳ ಆಯ್ಕೆ ಒತ್ತಡಕ್ಕೆ ಮಣಿದ ಕಾಂಗ್ರೆಸ್

ಮಂಗಳವಾರ, 24 ಮೇ 2016 (19:27 IST)
ರಾಜ್ಯದ ಹಿತಾಸಕ್ತಿಯನ್ನು ಮರೆತಿರುವ ರಾಷ್ಟ್ರೀಯ ಪಕ್ಷಗಳು ರಾಜ್ಯಸಭೆ ಚುನಾವಣೆಗೆ ಪರರಾಜ್ಯದ ರಾಜ್ಯಕಾರಣಿಗಳನ್ನು ಆಯ್ಕೆ ಮಾಡುತ್ತಿವೆ ಎನ್ನುವ ಆಕ್ರೋಶ ರಾಜ್ಯದಲ್ಲಿ ಕೇಳಿಬರುತ್ತಿದೆ. 
 
ರಾಜ್ಯಸಭೆ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ತುಳಿದಿರುವ ಹಾದಿಯನ್ನೇ ತುಳಿದಿರುವ ಕಾಂಗ್ರೆಸ್, ಹೈಕಮಾಂಡ್ ಒತ್ತಡಕ್ಕೆ ಮಣಿದು ತಮಿಳನಾಡು ಮೂಲದ ಪಿ. ಚಿದಂಬರಂ ಅವರನ್ನು ಆಯ್ಕೆ ಮಾಡಲು ಮುಂದಾಗಿದೆ.
 
ಭಾರತೀಯ ಜನತಾ ಪಾರ್ಟಿ ಕಳೆದ 18 ವರ್ಷಗಳಿಂದ ಕನ್ನಡದ ಗಂಧ ಗಾಳಿ ತಿಳಿಯದ ಆಂಧ್ರ ಮೂಲದ ವೆಂಕಯ್ಯ ನಾಯ್ಡು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ಟೀಕೆಗೆ ಗುರಿಯಾಗಿದೆ. ಇದೀಗ, ಬಿಜೆಪಿ ಹಾದಿಯನ್ನೇ ತುಳಿದ ಕಾಂಗ್ರೆಸ್ ತಮಿಳುನಾಡು ಮೂಲದ ಪಿ. ಚಿದಂಬರಂ ಅವರನ್ನು ಆಯ್ಕೆ ಮಾಡಲು ಮುಂದಾಗಿದೆ.
 
ಟಿ.ಎ. ನಾರಾಯಣಗೌಡ ನೇತೃತ್ವದ ಕರವೇ ಕಾರ್ಯಕರ್ತರು ಕನ್ನಡಿಗರಲ್ಲದವರನ್ನು ರಾಜ್ಯಸಭೆಗೆ ಅಯ್ಕೆ ಮಾಡದಂತೆ ಬಿಜೆಪಿ ನಾಯಕರನ್ನು ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿರುವುದನ್ನು ಸ್ಮರಿಸಬಹುದು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ