ಕೆಲಸವಿಲ್ಲದೇ ತಿರುಗುತ್ತಿದ್ದ ತಂದೆಯೊಬ್ಬ ತನ್ನ ಹೆಂಡತಿ, ಮಗಳು, ಮಗನಿಗೆ ಬೆಂಕಿ ಹಚ್ಚಿರೋ ಅಮಾನವೀಯ ಘಟನೆ ನಡೆದಿದೆ.
ಬೆಂಗಳೂರಿನ ಭಕ್ಷಿಗಾರ್ಡನ್ ನಲ್ಲಿ ಘಟನೆ ನಡೆದಿದ್ದು, ಪತ್ನಿ ಗೀತಾ, ಪುತ್ರಿ ಕಾವೇರಿ ಹಾಗೂ ಪುತ್ರ ಶ್ರೀಕಾಂತ್ ಗೆ ಮಲಗಿದ್ದಾಗ ಬೆಂಕಿ ಹಚ್ಚಿದ ತಂದೆ ಮುರಳಿ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಘಟನೆಯಲ್ಲಿ ತಂದೆ ಹಾಗೂ ಮಕ್ಕಳಿಬ್ಬರು ಸಾವನ್ನಪ್ಪಿದ್ದರೆ, ಪತ್ನಿ ಗಂಭೀರ ಗಾಯಗೊಂಡಿದ್ದಾಳೆ.
ಕೌಟುಂಬಿಕ ಕಲಹ ಹಾಗೂ ಮನೆಯ ಆರ್ಥಿಕ ಬಿಕ್ಕಟ್ಟು ಕಾರಣ ಅಂತ ಮೇಲ್ನೋಟಕ್ಕೆ ಶಂಕೆ ವ್ಯಕ್ತಪಡಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.