ಸುರೇಶ್ ಹೇಳಿಕೆಯನ್ನ ವಿರೋಧಿಸಿದ ಪರಮೇಶ್ವರ್

geetha

ಶುಕ್ರವಾರ, 2 ಫೆಬ್ರವರಿ 2024 (20:00 IST)
ಬೆಂಗಳೂರು-ನಿನ್ನೆ ಸಿಎಂ ನಿವಾಸದಲ್ಲಿ ಸಭೆ ವಿಚಾರವಾಗಿ ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಊಟಕ್ಕೂ ಸೇರಬಾರದಾ.?ಸಿಎಂ ನಿನ್ನೆ ರಾತ್ರಿ ಎಲ್ಲಾ ಸಚಿವರನ್ನ ಊಟಕ್ಕೆ ಕರೆದಿದ್ರು.ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಗೆ ತಯಾರಿ ಬಗ್ಗೆ ಚರ್ಚೆ ಮಾಡಿದೆವು.ಅಧ್ಯಕ್ಷರು ಹಲವು ಸೂಚನೆ ನೀಡಿದ್ರು.ಕ್ಯಾಂಡಿಡೇಟ್ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.ಇನ್ನೂ ಪ್ರಕಾಶ್ ಹುಕ್ಕೇರಿ ನಾನು ಫುಟ್ಬಾಲಾ ಅನ್ನೋ ಹೇಳೀಕೆ ವಿಚಾರವಾಗಿ ಈ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
 
ಸಂಸದ ಡಿಕೆ ಸುರೇಶ್  ದೇಶ ವಿಭಜನೆ ಹೇಳಿಕೆ ವಿಚಾರವಾಗಿ ಸುರೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ.ಈ ದೇಶ ಒಗ್ಗೂಡಿಸಲು ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ.ಗಾಂಧೀಜಿ ಸೇರಿದಂತೆ ಹಲವರು ದೇಶ ಒಗ್ಗೂಡಿಸಲು ಮುಂದಾದ್ರು.ಗಾಂದೀಜಿ ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡ್ರು.ದೇಶ ಒಗ್ಗೂಡಿಸುವ ಮಾತನ್ನ ಆಡಬೇಕೇ ಹೊರತು, ವಿಭಜನೆ ಮಾತನ್ನ ಆಡಬಾರದು.ಸುರೇಶ್ ಯಾವ ಅರ್ಥದಲ್ಲಿ ಹೇಳಿದ್ರು ಗೊತ್ತಿಲ್ಲ.ಭಾರತ ಸ್ವಾತಂತ್ರ್ಯ ಬಂದಾಗ ನಾವು ಹುಟ್ಟಿರಲಿಲ್ಲ.ಇದು ಭವ್ಯವಾದ ಭಾರತ ಹಾಗಾಗಿ ನಾವೆಲ್ಲಾ ಒಂದು ರಾಷ್ಟ್ರ, ಒಂದು ದೇಶ ಅಂತ ಇರಬೇಕು ಎಂದು ಸುರೇಶ್ ಹೇಳಿಕೆಯನ್ನ ಪರಮೇಶ್ವರ್ ವಿರೋಧಿಸಿದ್ದಾರೆ.
 
ನಮ್ಮಲ್ಲಿ 50% ಕಮೀಷನ್ ದಂಧೆ ನಡೆಯುತ್ತಿದೆ ಅಂತ ಕಾಂಗ್ರೆಸ್‌ನ ಮಾಜಿ ಶಾಸಕ ಶಿವರಾಮ್ ಹೇಳಿಕೆ ವಿಚಾರವಾಗಿ ಸಿಎಂ ಗಮನಕ್ಕೆ ತಂದಿದ್ರೆ ಒಳ್ಳೆಯದು.ಬಾಲಕೃಷ್ಣ, ಶಿವರಾಮ್ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ಮಾಡ್ತಿಲ್ಲವಾ ಅನ್ನೋ ಪ್ರಶ್ನೆ.?ಅವರ ವಯಕ್ತಿಕ ಹೇಳಿಕೆಗಳು ಪಕ್ಷದ ಹೇಳಿಕೆಗಳಲ್ಲ.ಅವರ ಅನಿಸಿಕೆ ಪಕ್ಷದ ಹೇಳಿಕೆಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.ಈಗ ನಾನು ಹೇಳಿದೆ ಭಾರತ ಭವ್ಯ ದೇಶ ಅಂತ.ದೇಶ ವಿಭಜನೆ ಹೇಳಿಕೆ ಸರಿಯಲ್ಲ ಅಂತ ಅದು ನನ್ನ ವೈಯಕ್ತಿಕ ಹೇಳಿಕೆ ಎಂದು ಪರಮೇಶ್ವರ್ ಹೇಳಿದ್ರು.ಕುಮಾರಸ್ವಾಮಿ ಬಿಹಾರ ರೀತಿಯಲ್ಲಿ ರಾಜ್ಯದಲ್ಲಿ ಸರ್ಕಾರ ಬೀಳಲಿದೆ ಅನ್ನೋ ಹೇಳಿಕೆ ವಿಚಾರವಾಗಿ ಅವರು ಕಾಯುತ್ತಾ ಕೂರಲಿ.ನೋಡಿಕೊಂಡು ಕೂರಲಿ ಏನಾಗುತ್ತೆ ಅಂತ.ತುಮಕೂರು ಲೋಕಸಭೆ ಮುದ್ದಹನುಮೇಗೌಡಗೆ ಟಿಕೆಟ್ ನೀಡುವ ವಿಚಾರವಾಗಿ ಟಿಕೆಟ್ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ.ಹೈಕಮಾಂಡ್ ಯಾರನ್ನ ಫೈನಲ್ ಮಾಡಿ ಕಳಿಸುತ್ತೆ ಅವರ ಪರ ಕೆಲಸ ಮಾಡ್ತೀವಿ ಎಂದು ಪರಮೇಶ್ವರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ