ರಾಜ್ಯದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ ಸೃಷ್ಟಿಸಿದೆ. ರಾಜ್ಯದ ಗಡಿಯಲ್ಲಿ ಹದ್ದಿನ ಕಣ್ಣಿಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಆದ್ರೆ, ಕಲಬುರಗಿಯಲ್ಲಿ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದ ಬಳಿಯ ಚೆಕ್ಪೋಸ್ಟ್ನಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲದಂತಾಗಿದೆ. ಕಲಬುರಗಿ ಗಡಿಯಲ್ಲಿ ಹೆಸರಿಗೆ ಮಾತ್ರ ಚೆಕ್ ಪೋಸ್ಟ್ ನಿರ್ಮಾಣವಾಗಿದೆ.
ಮಹಾರಾಷ್ಟ್ರದಿಂದ ವಾಹನಗಳು ಸಲೀಸಾಗಿ ಒಳನುಗ್ಗುತ್ತಿದ್ರು, ಯಾವ ಅಧಿಕಾರಿಗಳು ಸಹ ಎಚ್ಚೆತ್ತುಕೊಳ್ಳುತ್ತಿಲ್ಲ. ಚೆಕ್ ಪೋಸ್ಟ್ನಲ್ಲಿ ಹೆಸರಿಗೆ ಮಾತ್ರ ಓರ್ವ ಕಾನ್ಸ್ಟೇಬಲ್ ನೇಮಕವಾಗಿದ್ದಾರೆ. ಇಲ್ಲಿ ಯಾವೊಬ್ಬ ಆರೋಗ್ಯ ಇಲಾಖೆ ಅಧಿಕಾರಿಗಳು ಇಲ್ಲದೆ ಇರುವುದರಿಂದ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.