ಪೋಷಕರೇ ಮಕ್ಕಳ ಆರೋಗ್ಯದ ಬಗ್ಗೆ ಇರಲಿ ಎಚ್ಚರ..!

ಬುಧವಾರ, 5 ಏಪ್ರಿಲ್ 2023 (18:47 IST)
ಇತ್ತೀಚಿನ ದಿನಗಳಲ್ಲಿ ವೈರಲ್ ಫೀವರ್‌ಗಳು ಹೆಚ್ಚಾಗಿದ್ದು ಮಕ್ಕಳ ಆರೋಗ್ಯದ ಮೇಲೂ ಸಹ ದುಷ್ಪರಿಣಾಮಗಳನ್ನು ಬೀರುತ್ತಿವೆ. ಕೇವಲ ಚಳಿಗಾಲದಲ್ಲಿ ಅಷ್ಟೇ ಅಲ್ಲದೆ ಬೇಸಿಗೆಯಲ್ಲೂ ಸಹ ವೈರಲ್ ಫೀವರ್ ಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.ಇನ್ನು ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ಮಕ್ಕಳಲ್ಲಿ ಇ ಸ್ಟ್ರೋಕ್ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇಷ್ಟೇ ಅಲ್ಲದೇ ದಡಾರ, ಚಿಕನ್ ಪಾಕ್ಸ್ ಗಳು ಹೆಚ್ಚು ಆಗಿ ಕಾಣಿಸಿಕೊಳ್ಳುತ್ತಿದ್ದು, ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ವೈದ್ಯರು ಹೇಳುತ್ತಿದ್ದಾರೆ.

ಇನ್ನು ಕೇವಲ ಬೇಸಿಗೆಯಲ್ಲಿ ಕಾಣಿಸುವ ವೈರಸ್ಗಳಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡH3N2 ಇನ್ಫ್ಲುಯೆನ್ಸ್ ವೈರಸ್ ಗಳು ಸಹ ಮಕ್ಕಳ ಆರೋಗ್ಯದ ಮೇಲೆ ಅತಿ ಹೆಚ್ಚು ಪರಿಣಾಮ ಬೀರುತ್ತಿವೆ.  ಈ ವೈರಸ್ ಗಳು ಯಾವುದೇ ರೀತಿ ಹಾನಿಕಾರಕವಾಗಿರದೇ ಇಂತಹ ಕಾಯಿಲೆಗಳು 6-7 ದಿನಗಳಲ್ಲಿ ಗುಣಮುಖವಾಗುತ್ತದೆ ಆದರೂ ಸಹ ಯಾವುದೇ ರೀತಿಯ ನಿರ್ಲಕ್ಷ ವಹಿಸದೆ ಕೂಡಲೇ ವೈದ್ಯರ ಬಳಿ ಕರೆದುಕೊಂಡು ಹೋಗುವುದು ಉತ್ತಮ.

ಒಟ್ಟಿನಲ್ಲಿ ಪೋಷಕರು ಮಕ್ಕಳನ್ನು ಬೇಸಿಗೆಯಲ್ಲಿ ಬಹಳ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಮಕ್ಕಳಿಗೆ ಹೆಚ್ಚು ನೀರನ್ನು ಕುಡಿಸುವುದು ನೀರಿನ ಅಂಶ ಇರುವ ಆಹಾರವನ್ನು ತಿನ್ನಿಸುವುದು ದಿನಕ್ಕೆ ಎರಡು ಬಾರಿ ತೇನ್ ನೀರಿನ ಸ್ನಾನ ಮಾಡಿಸುವುದು ಹಾಗೂ ಅತಿ ಹೆಚ್ಚು ಸಸ್ಯವನ್ನು ನೀಡುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ